ಯಶಸ್ಸಿನಿಂದ ಮುದಗೊಂಡಿರುವ ಅಮೆರಿಕ ಮೊಬೈಲ್ ಹಾಂಡ್‌ಸೆಟ್ ತಯಾರಕರಾದ ಮೋಟರೋಲಾ ಬುಧವಾರ 2008ರ ಸಾಲಿನ 8ನೇ ಹೊಸ ಮೋಟೊಯುವಾ ಸೆಟ್ ಅನ್ನು ಬಿಡುಗಡೆ ಮಾಡಿದೆ.
ಈ ಸೆಟ್‌ನ ಬೆಲೆ 5,150 ರೂ. ಆಗಿದೆ. ಮೋಟೊವಾ ಈಎಂ 325ನಲ್ಲಿ ಒಂದು ಸ್ಪರ್ಶದಿಂದ ಎಂ.ಪಿ3 ಲೈಬ್ರೆರಿ ತಲುಪುವ ಮೊಬೈಲ್ ಸಂಗೀತ ಸೇವೆ ಮತ್ತು 2ಜಿಬಿಯಷ್ಟು ವಿಸ್ತರಿಸಬಲ್ಲ ಮೆಮ್ಮೊರಿ ಹೊಂದಿದೆ ಎಂದು ಕಂಪೆನಿ ಅಧಿಕಾರಿಗಳು ತಿಳಿಸಿದ್ದಾರೆ.
ಎಫ್ಎಂನಲ್ಲಿ ರೆಡಿಯೋ ಡಾಟ ಸಿಸ್ಟಮ್(ಆರ್‌ಡಿಎಸ್2) ತಂತ್ರಜ್ಞಾನವಿದೆ, ಇದು ಬಳಕೆದಾರರು ತಮ್ಮ ನೆಚ್ಚಿನ ಸ್ಟೇಶನಗಳ ಬಗೆಗಿನ ಮಾಹಿತಿಗಳನ್ನು ಲಿಖಿತ ಸಂದೇಶ ಕಳುಹಿಸುವ ಮೂಲಕ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಸೌಲಭ್ಯವನ್ನು ಒದಗಿಸುತ್ತದೆ.
1000 ದೂರವಾಣಿ ಸಂಖ್ಯೆಗಳನ್ನು ಮತ್ತು 750 ಸಂದೇಶಗಳನ್ನು ಸಂಗ್ರಹಿಸಿಡುವ ಸ್ಟೊರೇಜ್ ಸಾಮರ್ಥ್ಯವನ್ನು ಇದು ಹೊಂದಿದೆ. ಛಾಯಚಿತ್ರ ತೆಗೆಯಲು ಅಟೊ-ಸೇವ್ ಆಯ್ಕೆ ಮತ್ತು 4ಎಕ್ಸ್ ಝೂಮ್ ಸೌಲಭ್ಯವುಳ್ಳ 1.3 ಮೆಗಾಫಿಕ್ಸಲ್ ಕ್ಯಾಮರಾ, ಒಳಬರುವ ಕರೆಗಳನ್ನು ಸ್ವೀಕರಿಸಲು ಅಥವಾ ನಿರಾಕರಿಸಲು ಕಾಲ್ ಬ್ಲಾಕಿಂಗ್3 ಸೌಲಭ್ಯವನ್ನು ಹೊಸ ಮೋಟೊಯುವಾ ಸೆಟ್ ಹೊಂದಿದೆ. |