ಹಣದುಬ್ಬರದ ಕುಸಿತದ ಓಟ ಮುಂದುವರಿದಿದ್ದು, ಡಿಸೆಂಬರ್ 20ರ ವರದಿಯನ್ವಯ ಪ್ರತಿಶತ 23ರಷ್ಟು ಕುಸಿತ ಕಾಣುವ ಮೂಲಕ ಹಣದುಬ್ಬರ ಶೇ.6.38ರಷ್ಟು ಇಳಿಕೆ ಕಂಡಿದೆ.
ಕಳೆದ ವಾರಕ್ಕೆ ಹೋಲಿಸಿದಾಗ ಅಂಕಿ ಅಂಶಗಳಲ್ಲಿ 24 ಪ್ರತಿಶತದಷ್ಟು ಕುಸಿತ ದಾಖಲಾಗಿದೆ.
ಈ ವರ್ಷದ ಅತಿ ಹೆಚ್ಚಿನ ಮಟ್ಟವಾಗಿದ್ದ 12.91 ಪ್ರತಿಶತದಿಂದ ಅರ್ಧಕ್ಕಿಳಿದು ಒಂಬತ್ತು ತಿಂಗಳಿನಲ್ಲಿ ಅತಿ ಕಡಿಮೆ ಮಟ್ಟವಾಗಿದ್ದ 6.61 ಪ್ರತಿಶತ ತಲುಪಿತ್ತು. ಇದು ಆರ್‌ಬಿಐನಿಂದ ಬಡ್ಡಿದರದಲ್ಲಿ ಇನ್ನಷ್ಟು ಕಡಿತ ಸೂಚನೆಗೆ ಕಾರಣವಾಗಿತ್ತು.
ಕಚ್ಚಾವಸ್ತು ಮತ್ತು ಉತ್ಪನ್ನಗಳ ಬೆಲೆಗಳಲ್ಲಿ ಅಭೂತಪೂರ್ವ ಕುಸಿತದ ಹಿನ್ನಲೆಯಲ್ಲಿ 2009-10ರ ಸಾಲಿನಲ್ಲೂ ಭಾರತದ ಆರ್ಥಿಕತೆ ಕುಸಿತಕ್ಕೆ ಒಳಗಾಗುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ಶಂಕೆ ವ್ಯಕ್ತಪಡಿಸಿದ್ದಾರೆ.
"ಪ್ರಸಕ್ತದ ಆರ್ಥಿಕ ಕುಸಿತ ಇದೇ ವೇಗದಲ್ಲಿ ಮುಂದುವರಿದಲ್ಲಿ ಈ ಆರ್ಥಿಕ ವರ್ಷದ ಕೊನೆಯಲ್ಲಿ ಅಂಕಿಅಂಶಗಳು ಎರಡು ಪ್ರತಿಶತಕ್ಕಿಂತಲೂ ಕೆಳಕ್ಕಿಳಿಯಬಹುದು. ಕ್ಯೂ2 ಮತ್ತು ಎಫ್‌ವೈ10 ವೇಳೆಗೆ ಇದು ಶೂನ್ಯ ಪ್ರತಿಶತ ತಲುಪಬಹುದು" ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮುಖ್ಯ ಖಜಾಂಚಿ ಅಶಿಶ್ ಪಾರ್ಥಸಾರಥಿ ಅಭಿಪ್ರಾಯ ಪಟ್ಟಿದ್ದಾರೆ. |