ಹೊಸ ವರ್ಷದ ಆರಂಭ ಉದ್ಯೋಗಾಕಾಂಕ್ಷಿಗಳಿಗೆ ಶುಭಯೋಗ ತರುವ ಸಾಧ್ಯತೆಗಳಿವೆ. ನಿರುದ್ಯೋಗಿಗಳಿಗೆ ಶೀಘ್ರದಲ್ಲಿ ಉತ್ತಮ ಉದ್ಯೋಗಾವಕಾಶ ದೊರೆಯಲಿದ್ದು, ಕಂಪೆನಿಗಳು ಸುಮಾರು 2,50 ಲಕ್ಷ ಹುದ್ದೆಗಳಿಗೆ ನೇಮಕ ಮಾಡುವುದಾಗಿ ಪ್ರಕಟಿಸಿವೆ.
ಉದ್ದೇಶಿತ 2.5 ಲಕ್ಷ ಹುದ್ದೆಗಳಲ್ಲಿ ಹೆಚ್ಚಿನ ಹುದ್ದೆಗಳು ಹಣಕಾಸು ಸಂಸ್ಥೆಗಳಿಗೆ ಸಂಬಂಧಿತವಾಗಿದ್ದು ವರ್ಷದ ಆರು ತಿಂಗಳ ನಂತರಉದ್ಯೋಗ ಕ್ಷೇತ್ರದ ಸ್ಥಿತಿ ಬದಲಾಗಲಿದೆ ಎಂದು ಮೂಲಗಳು ತಿಳಿಸಿವೆ.
ದೇಶದ ಬೃಹತ್ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಾದ ಎಸ್‌ಬಿಐ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಮಾ ಕಂಪೆನಿಗಳಾದ,ರಿಲಯನ್ಸ್ ಲೈಫ್, ಎಸ್‌ಬಿಐ ಲೈಫ್, ಮೆಟ್‌ಲೈಫ್,ನ್ಯೂಯಾರ್ಕ್ ಲೈಫ್ ಸಂಸ್ಥೆಗಳು ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳಲಾಗಿದೆ.
ಬಿಪಿಒ ಮತ್ತು ಹೆಲ್ತ್ ಕೇರ್ ಕಂಪೆನಿಗಳಾದ ಎಸಿಎಸ್ ಮತ್ತು ಎಸೆಂಟಿಯಾ ಕಂಪೆನಿಗಳು ಸಾವಿರಾರು ಹುದ್ದೆಗಳನ್ನು ತುಂಬುವುದಾಗಿ ಹೇಳಿಕೊಂಡಿವೆ.
ಉದ್ದೇಶಿತ 2.5 ಲಕ್ಷ ಉದ್ಯೋಗಾವಕಾಶಗಳಲ್ಲಿ ಒಂದು ಲಕ್ಷ ಹುದ್ದೆಗಳು ಸಂಪೂರ್ಣ ಅವಧಿಯದಾಗಿದ್ದು, ಉಳಿದ 1.5 ಲಕ್ಷ ಹುದ್ದೆಗಳು ಅರೆಕಾಲಿಕವಾಗಿದೆ ಎಂದು ಕಂಪೆನಿಗಳ ಮೂಲಗಳು ತಿಳಿಸಿವೆ. |