ದೇಶದ ಸಾಫ್ಟ್‌ವೇರ್ ಕ್ಷೇತ್ರದ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಎಚ್‌ಸಿಎಲ್ ಟೆಕ್ನಾಲಾಜೀಸ್ ಲಿಮಿಟೆಡ್, ಇಸ್ರೇಲ್‌ನಲ್ಲಿ ಹೈಟೆಕ್ ಪಾರ್ಕ್‌ಗಳನ್ನು ತೆರೆಯಲು ಉದ್ದೇಶಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಭಾರತೀಯ ಮೂಲದ ಸಾಫ್ಟ್‌ವೇರ್ ಕಂಪೆನಿ ಎಚ್‌ಸಿಎಲ್ ಟೆಕ್ನಾಲಾಜೀಸ್, ಮೆಶುಲಮ್ ಲೆವಿನ್‌ಸ್ಟೇನ್ ಕಾಂಟ್ರಾಕ್ಟಿಂಗ್ ಆಂಡ್ ಇಂಜಿನೀಯರಿಂಗ್ ಲಿಮಿಟೆಡ್ ಕಂಪೆನಿಯಿಂದ ಕಚೇರಿಗಾಗಿ 400 ಚದುರ ಅಡಿ ಸ್ಥಳ ಹಾಗೂ 15 ಹೈಟೆಕ್ ಪಾರ್ಕ್‌ಗಳನ್ನು ಸ್ಥಾಪಿಸಲು ಸ್ಥಳವನ್ನು ಬಾಡಿಗೆ ಪಡೆದಿದೆ ಎಂದು ಇಸ್ರೆಲ್‌ನ ಬಿಜಿನೆಸ್ ಡೈಲಿ ಗ್ಲೋಬ್ಸ್ ಪತ್ರಿಕೆ ವರದಿ ಮಾಡಿದೆ. ಎಚ್‌ಸಿಎಲ್ ಕಂಪೆನಿ ಕಚೇರಿ ಹಾಗೂ 15 ಹೈಟೆಕ್ ಪಾರ್ಕ್‌ಗಳಿಗಾಗಿ ಮಾಸಿಕವಾಗಿ 6700ಡಾಲರ್ ಬಾಡಿಗೆಯನ್ನು ಪಾವತಿಸುತ್ತಿದೆ ಎಂದು ಪತ್ರಿಕೆ ವರದಿ ಮಾಡಿದೆ. ಇಸ್ರೆಲ್ ಮತ್ತು ಅಂತಾರಾಷ್ಟ್ರೀಯ ಹೈಟೆಕ್ ಕಂಪೆನಿಗಳಿಗಾಗಿ ನಿರ್ಮಿಸಲಾದ ಅತ್ಯಾಧುನಿಕ ಮತ್ತು ಬಹುಮೌಲ್ಯದ ಕಟ್ಟಡವನ್ನು ಎಚ್‌ಸಿಎಲ್ ಕಂಪೆನಿಗೆ ನೀಡಲಾಗಿದೆ ಎಂದು ಎಚ್‌ಸಿಎಲ್‌ಗೆ ಬಾಡಿಗೆಗೆ ಸ್ಥಳವನ್ನು ನೀಡಿದ ಕಂಪೆನಿಯ ಅಧ್ಯಕ್ಷರಾದ ಲೆವಿನ್‌ಸ್ಟನ್ ತಿಳಿಸಿದ್ದಾರೆ. |