ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟೆಲಿಕಾಂ: 1.5 ಲಕ್ಷ ಹುದ್ದೆಗಳ ಭರ್ತಿಗೆ ಸಿದ್ದತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೆಲಿಕಾಂ: 1.5 ಲಕ್ಷ ಹುದ್ದೆಗಳ ಭರ್ತಿಗೆ ಸಿದ್ದತೆ
PTI
ಜಾಗತಿಕ ಆರ್ಥಿಕ ಕುಸಿತದಿಂದಾಗಿ ಅನೇಕ ಕಂಪೆನಿಗಳು ನಷ್ಟ ಅನುಭವಿಸಿ ಹುದ್ದೆಗಳನ್ನು ವಜಾಗೊಳಿಸುತ್ತಿವೆ. ಆದರೆ ಟೆಲಿಕಾಂ ಕ್ಷೇತ್ರದ ಕಂಪೆನಿಗಳ ವಹಿವಾಟು ಭಿನ್ನವಾಗಿದೆ. ಪ್ರಸಕ್ತ ವರ್ಷದಲ್ಲಿ 1,50,000 ಹೆಚ್ಚುವರಿ ಹುದ್ದೆಗಳನ್ನು ಭರ್ತಿ ಮಾಡುವ ಅಗತ್ಯವಿದೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ.

ಟೆಲಿಕಾಂ ಕ್ಷೇತ್ರಕ್ಕೆ ಅನೇಕ ನೂತನ ಕಂಪೆನಿಗಳು ಲಗ್ಗೆ ಹಾಕುತ್ತಿದ್ದು, ಪ್ರಸ್ತುತವಿರುವ ಕಂಪೆನಿಗಳು ವಹಿವಾಟು ವಿಸ್ತರಣೆಗೆ ಆದ್ಯತೆ ನೀಡುತ್ತಿವೆ. ಕೇಂದ್ರ ಸರಕಾರ ಪ್ರಸಕ್ತ ವರ್ಷದಲ್ಲಿ ವಹಿವಾಟು ಆರಂಭಿಸಲು 120 ಹೊಸ ಕಂಪೆನಿಗಳಿಗೆ ಪರವಾನಿಗಿ ನೀಡಿದೆ ಎಂದು ಟೆಲಿಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್ ಗ್ರಾಹಕರ ಸಂಖ್ಯೆಯಲ್ಲಿ ನಿರಂತರ ಹೆಚ್ಚಳವಾಗಿ, ಕಂಪೆನಿಗಳು ಜಾಗತಿಕ ಆರ್ಥಿಕ ಕುಸಿತದಂತಹ ಸಂದರ್ಭದಲ್ಲಿ ಕೂಡಾ ಲಾಭ ಪಡೆಯುತ್ತಿರುವುದರಿಂದ ಅನೇಕ ಕಂಪೆನಿಗಳು ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಹಾಕುವಂತೆ ಮಾಡಿದೆ. ಪ್ರಸಕ್ತ ವರ್ಷ ವಹಿವಾಟು ಆರಂಭಿಸುವ ಹೊಸ ಕಂಪೆನಿಗಳಿಗೆ 1 ಲಕ್ಷ ಉದ್ಯೋಗಿಗಳ ಅವಶ್ಯಕತೆಯಿದ್ದು, 3ಜಿ, ವಿಮ್ಯಾಕ್ಸ್ ಸೇವೆಗಳನ್ನು ಆರಂಭಿಸಿರುವ ಕಂಪೆನಿಗಳಿಗೆ 50 ಸಾವಿರ ಹೆಚ್ಚುವರಿ ಉದ್ಯೋಗಿಗಳ ಅಗತ್ಯತೆಯಿದೆ ಎಂದು ಬೆಂಗಳೂರು ಮೂಲದ ಹೆಡ್‌ ಹಂಟರ್ಸ್ ಇಂಡಿಯಾ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.

ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಹಾಕಿರುವ ನೂತನ ಕಂಪೆನಿಗಳು 1 ಲಕ್ಷ ಅನುಭವಿಕ ಉದ್ಯೋಗಿಗಳ ಹುಡುಕಾಟದಲ್ಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅನುಭವಸ್ಥ ಉದ್ಯೋಗಿಗಳು ದೊರೆಯುವುದು ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ 1,50,000 ಉದ್ಯೋಗಿಗಳನ್ನು ನೇರ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ರಿಟೇಲ್ ಔಟ್‌ಲೆಟ್,ಪ್ರೀಪೇಡ್ ಕಾರ್ಡ್ ಮಾರಾಟಗಾರರು ಮತ್ತು ಗೋಪುರಗಳ ನಿರ್ಮಾಣಕ್ಕೆ ಅಗತ್ಯವಿರುವ 1.5 ಮಿಲಿಯನ್ ಉದ್ಯೋಗಿಗಳನ್ನು ನಂತರ ನೇಮಕ ಮಾಡಿಕೊಳ್ಳಲಿವೆ ಎಂದು ಸಿಇಒ ಲಕ್ಷ್ಮಿಕಾಂತ್ ವಿವರಣೆ ನೀಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಸ್ರೆಲ್‌ನಲ್ಲಿ ವಹಿವಾಟು ಆರಂಭಿಸಿದ ಎಚ್‌ಸಿಎಲ್
ಶೀಘ್ರದಲ್ಲಿ 2.5 ಲಕ್ಷ ಹುದ್ದೆಗಳಿಗೆ ನೇಮಕ
ಜಗತ್ತಿನಲ್ಲೇ ಅತಿ ಹೆಚ್ಚು ನಷ್ಟ ಅನುಭವಿಸಿದ ಅನಿಲ್
ಹಣದುಬ್ಬರ ಶೇ.6,38ಕ್ಕೆ ಇಳಿಕೆ
ಮೋಟರೋಲಾದಿಂದ ಹೊಸ ಮೋಟೊಯುವಾ ಸೆಟ್
ಉಕ್ರೇನ್‌ಗೆ ಗ್ಯಾಸ್ ಪೂರೈಕೆ ಕಡಿತಗೊಳಿಸಲಿರುವ ರಷ್ಯಾ