ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಯಿಂದಾಗಿ ಸಾಗರೋತ್ತರ ಮಾರುಕಟ್ಟೆ ದುರ್ಬಲವಾದ ಹಿನ್ನೆಲೆಯಲ್ಲಿ ಚಿನ್ನದ ದರದಲ್ಲಿ ಶೇ.1.36 ರಷ್ಟು ಇಳಿಕೆಯಾಗಿದೆ ಎಂದು ಚಿನಿವಾರ ಪೇಟೆಯ ಮೂಲಗಳು ತಿಳಿಸಿವೆ. ಜೂನ್ ತಿಂಗಳಲ್ಲಿ ಪ್ರತಿ 19 ಗ್ರಾಂಗೆ 13,621 ರೂಪಾಯಿಗಳಿದ್ದ ಚಿನ್ನದ ದರ, ಡಿಸೆಂಬರ್ ತಿಂಗಳಿನಲ್ಲಿ ಶೇ.1.36 ರಷ್ಟು ಇಳಿಕೆಯಾಗಿದೆ.ಫೆಬ್ರವರಿ ಮತ್ತು ಏಪ್ರಿಲ್ ತಿಂಗಳಲ್ಲಿ ಶೇ.0.97 ರಷ್ಟು ಇಳಿಕೆಯಾಗಿ ಪ್ರತಿ ಗ್ರಾಂಗೆ 13,629 ರೂಪಾಯಿಗಳಿಂದ 13,614ರೂಪಾಯಿಗಳಿಗೆ ಇಳಿಕೆಯಾಗಿತ್ತು. ಕಚ್ಚಾ ತೈಲ ದರಗಳ ನಿರಂತರ ಇಳಿಕೆ, ಡಾಲರ್ ಮೌಲ್ಯದಲ್ಲಿ ಏರಿಕೆಯಿಂದಾಗಿ ಪರೋಕ್ಷ ಹೂಡಿಕೆಯಾಗಿದ್ದ ಚಿನ್ನದ ದರದಲ್ಲಿ ಇಳಿಕೆಯಾಗಿದೆ ಎಂದು ಚಿನಿವಾರಪೇಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. |