ದೇಶದ ಆರ್ಥಿಕ ಕುಸಿತವನ್ನು ನಿಯಂತ್ರಿಸಲು ಕೇಂದ್ರ ಸರಕಾರ ಎರಡನೇ ಉತ್ತೇಜನ ಪ್ಯಾಕೇಜ್ ಘೋಷಿಸಿದ್ದು, ಉದ್ಯಮಗಳು ವಿದೇಶಿಗಳಿಂದ ಹೆಚ್ಚಿನ ಸಾಲ ಪಡೆಯಲು ಹಾಗೂ ದೇಶದಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವಂತೆ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಅಂತಿಮ ಪ್ಯಾಕೇಜ್ ಇದಾಗಿದ್ದು, ರಿಸರ್ವ್ ಬ್ಯಾಂಕ್ ಸಹಯೋಗದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹೆಚ್ಚುವರಿ ವೆಚ್ಚವನ್ನು ಪೂರೈಸುವುದಲ್ಲದೇ ನಗದು ಚಲಾವಣೆಗೆ ಅವಕಾಶ ನೀಡಿದೆ ಎಂದು ಹೇಳಲಾಗಿದೆ.
ಹೆಚ್ಚುವರಿ ಅಗತ್ಯತೆಗಳನ್ನು ನಿಭಾಯಿಸಲು ರಾಜ್ಯ ಸರಕಾರಗಳು 30 ಸಾವಿರ ಕೋಟಿಯವರೆಗೆ ಸಾಲವನ್ನು ಪಡೆಯಬಹುದಾಗಿದ್ದು, ಪ್ಯಾಕೇಜ್ ಘೋಷಣೆಯಿಂದಾಗಿ ಸಾಲವನ್ನು ಪಡೆಯಲು ಅಡ್ಡಿಯಾಗಿರುವ ಅಡೆತಡೆಗಳನ್ನು ನಿವಾರಿಸಲಾಗಿದೆ ಎಂದು ವಿತ್ತ ಸಚಿವಾಲಯ ಪ್ರಕಟಿಸಿದೆ.
ದೇಶದ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಿಮೆಂಟ್ ಮೇಲೆ ವಿಧಿಸಲಾಗುತ್ತಿರುವ ತೆರಿಗೆಯನ್ನು ರದ್ದುಗೊಳಿಸಲಾಗಿದೆ.ಹಣದುಬ್ಬರ ಇಳಿಕೆಯಿಂದಾಗಿ ಟಿಎಂಟಿ ಬಾರ್‌ಗಳು ,ಸ್ಟ್ರಕ್ಚರಲ್ ನಿಯಮಗಳನ್ನು ತೆಗೆದು ಹಾಕಲಾಗಿದೆ.
ಪ್ಯಾಕೇಜ್ ಘೋಷಿಸಿದ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ, ಗೃಹ ಕ್ಷೇತ್ರಕ್ಕೆ ಸಣ್ಣ ಮತ್ತು ಮದ್ಯಮ ಕೈಗಾರಿಕೆಗಳಿಗೆ ನಾನ್-ಬ್ಯಾಂಕಿಂಗ್ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದ್ರಾರೆ. |