ದೇಶದ ಭದ್ರತೆಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ವಸ್ತುಗಳ ಕೈಗಾರಿಕೆಯನ್ನು ಬಲಪಡಿಸಲು ಸರಕಾರ, ವಿದೇಶದಿಂದ ಅಮುದು ಮಾಡಿಕೊಳ್ಳುವ ರಕ್ಷಣಾ ಸಾಮಗ್ರಿಗಳಿಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ವಸ್ತುಗಳ ದರಗಳನ್ನು ಕಡಿತಗೊಳಿಸಬೇಕು ಎಂದು ಕೈಗಾರಿಕೋದ್ಯಮ ಸಂಘ ಅಸೋಚಾಮ್ ಒತ್ತಾಯಿಸಿದೆ.
ಭದ್ರತೆಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ವಸ್ತುಗಳ ಅಮುದು ತೆರಿಗೆ ಶೇ.37 ರಷ್ಟಾಗಿದ್ದು, ಟೆಲಿಕಾಂ ಉಪಕರಣಗಳ ಅಮುದು ತೆರಿಗೆ ಶೇ.12 ರಷ್ಟು ನಿಗದಿಪಡಿಸಿದ್ದರಿಂದ ತಾರತಮ್ಯವೆಸಗಿದಂತಾಗಿದೆ ಎಂದು ಅಸೋಚಾಮ್ ದೂರಿದೆ.
ಅಮುದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ ವಸ್ತುಗಳ ದರಗಳನ್ನು ಶೇ.37 ರಿಂದ ಶೇ.18.5ಕ್ಕೆ ಕಡಿತಗೊಳಿಸುವ ಅವಶ್ಕತೆಯಿದ್ದು, ದೇಶದ ಭಧ್ರತೆಗೆ ಅಗತ್ಯವಾಗಿರುವ ಟೆಲಿಕಾಂ ಅಮುದು ದರವನ್ನು ಶೂನ್ಯಕ್ಕೆ ಇಳಿಸುವತ್ತ ಸರಕಾರ ಗಮನಹರಿಸಲು ಎಂದು ಅಸೋಚಾಮ್ ಪ್ರಕಟಿಸಿದೆ. |