ಜಾಗತಿಕ ಪ್ರಮುಖ ಸಾಫ್ಟ್‌ವೇರ್ ಕಂಪೆನಿಯಾದ ಮೈಕ್ರೋಸಾಫ್ಟ್, ಪ್ರಸಕ್ತ ತಿಂಗಳಿನಲ್ಲಿ 15 ಸಾವಿರ ಹುದ್ದೆಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೆಕ್ರೋಸಾಫ್ಟ್ ಕಂಪೆನಿ ಕಳೆದ 32 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ 15 ಸಾವಿರ ಹುದ್ದೆಗಳನ್ನು ಕಡಿತ ಮಾಡಲು ಸಿದ್ದತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಕಂಪೆನಿಯಲ್ಲಿರುವ ಒಟ್ಟು ಉದ್ಯೋಗಿಗಳಲ್ಲಿ 9,100 ಹುದ್ದೆಗಳನ್ನು ಕಡಿತಗೊಳಿಸಲು ನಿರ್ಧರಿಸಿತ್ತು. ಆದರೆ ನಂತರ ನಡೆದ ಬೆಳವಣಿಗೆಗಳಲ್ಲಿ 15 ಸಾವಿರ ಹುದ್ದೆಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮೆಕ್ರೋಸಾಫ್ಟ್ ವಕ್ತಾರರು ತಿಳಿಸಿದ್ದಾರೆ. |