ನವದೆಹಲಿ : ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಡಿಸೆಂಬರ್ ತಿಂಗಳಲ್ಲಿ ವಾಹನ ಮಾರಾಟದಲ್ಲಿ ಶೇ. 47 ರಷ್ಟು ಕುಸಿತವಾಗಿದೆ ಎಂದು ವಾಹನೋದ್ಯಮ ತಯಾರಿಕೆ ಸಂಸ್ಥೆಯಾದ ಟಾಟಾ ಮೋಟಾರ್ಸ್ ಪ್ರಕಟಿಸಿದೆ.
ಜಾಗತಿಕ ಆರ್ಥಿಕ ಕುಸಿತದಿಂದಾಗಿ ಸಾಲ ಸೌಲಭ್ಯ ಬಿಕ್ಕಟ್ಟು ಎದುರಾಗಿದ್ದು, ಹೆಚ್ಚಿನ ಬಡ್ಡಿ ದರದಿಂದಾಗಿ ಗ್ರಾಹಕರು ವಾಹನಗಳ ಖರೀದಿಯಿಂದ ದೂರವುಳಿದಿದ್ದಾರೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶಿಯ ಮಾರುಕಟ್ಟೆಯಲ್ಲಿ ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ 14,318 ವಾಹನಗಳನ್ನು ಮಾರಾಟ ಮಾಡಲಾಗಿದ್ದು, ಹಿಂದಿನ ವರ್ಷದ ಡಿಸೆಂಬರ್ ತಿಂಗಳಿನಲ್ಲಿ 9,838 ವಾಹನಗಳನ್ನು ಮಾರಾಟ ಮಾಡಲಾಗಿದ್ದು, ಶೇ.31.28 ರಷ್ಟು ಇಳಿಕೆಯಾಗಿದೆ.
ಇಂಡಿಕಾ ಪ್ರಯಾಣಿಕ ಕಾರು ಕಳೆದ ವರ್ಷದ ಡಿಸೆಂಬರ್ ತಿಂಗಳಿಗೆ ಹೋಲಿಸಿದಲ್ಲಿ 6,749 ಕಾರುಗಳ ಮಾರಾಟವಾಗಿದ್ದು ಶೇ.28.9 ರಷ್ಟು ಇಳಿಕೆಯಾಗಿದೆ ಎಂದು ಟಾಟಾ ಮೋಟಾರ್ಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. |