ನಾಸಿಕ್ ಜಿಲ್ಲೆಯ ಲಾಸಲ್‌ಗಾಂವ್‌ನ ಕೃಷಿ ಉತ್ಪಾದನೆ ಮಾರುಕಟ್ಟೆಯಲ್ಲಿ ಒಂದೇ ದಿನದ ಅವಧಿಯಲ್ಲಿ 46,500 ಕ್ವಿಂಟಾಲ್ ಈರುಳ್ಳಿ ಮಾರಾಟವಾಗಿ ದಾಖಲೆ ಸ್ಥಾಪಿಸಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.
ಹಿಂದಿನ ದಿನದಂದು 1,602 ವಾಹನಗಳಲ್ಲಿ ಈರುಳ್ಳಿಯನ್ನು ತರಲಾಗಿತ್ತು.ಈರುಳ್ಳಿಯನ್ನು ಪ್ರತಿ ಕ್ವಿಂಟಾಲ್‌ಗೆ ಕನಿಷ್ಟ 983 ರೂಪಾಯಿಗಳಿಂದ ಗರಿಷ್ಟ 1,499 ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.
ದೇಶದಲ್ಲಿಯೇ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಲಾಸಲ್‌ಗಾಂವ್ ಪಟ್ಟಣದ ಎಪಿಎಂಸಿ, ಒಂದೇ ದಿನದಲ್ಲಿ 46,500 ಕ್ವಿಂಟಾಲ್ ಈರುಳ್ಳಿ ಮಾರಾಟ ಮಾಡಿದ್ದು. ಕೃಷಿ ಉತ್ಪಾದನಾ ಮಾರುಕಟ್ಟೆಯ 61 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ದಾಖಲಾಗಿದೆ. |