ಕೇಂದ್ರ ಸರಕಾರ ಎರಡನೇ ಉತ್ತೇಜನ ಪ್ಯಾಕೇಜ್ ಘೋಷಿಸಿರುವುದು ಹಾಗೂ ಆರ್‌ಬಿಐ ರೆಪೊ, ರಿವರ್ಸ್ ರೆಪೊ ದರಗಳನ್ನು ಕಡಿತ ಮಾಡಿರುವುದನ್ನು ಸ್ವಾಗತಿಸಿದ ಕೈಗಾರಿಕೋದ್ಯಮ ಸಂಸ್ಥೆ, ಬ್ಯಾಂಕ್‌ಗಳು ಸಾಲದ ಬಡ್ಡಿ ದರವನ್ನು ಮತ್ತಷ್ಟು ಕಡಿತಗೊಳಿಸಿದಲ್ಲಿ ರಫ್ತು ವಹಿವಾಟುದಾರರಿಗೆ ಅನುಕೂಲವಾಗಲಿದೆ ಎಂದು ಪ್ರಕಟಿಸಿದೆ.
ಅಪೆಕ್ಸ್ ಚೇಂಬರ್ಸ್, ಎಫ್‌ಐಸಿಸಿಐಆ ಮತ್ತು ಸಿಐಐ ಕೈಗಾರಿಕೋದ್ಯಮ ಸಂಸ್ಥೆಗಳು ಕೇಂದ್ರ ಸರಕಾರ ಉತ್ತೇಜನ ಪ್ಯಾಕೇಜ್ ಘೋಷಿಸಿರುವುದನ್ನು ಸ್ವಾಗತಿಸಿದ್ದು, ಪ್ಯಾಕೇಜ್‌ನಲ್ಲಿ ನಿರೀಕ್ಷಿತ ಪ್ರಮಾಣದ ಘೋಷಣೆಯಾಗಿಲ್ಲ ಎಂದು ಹೇಳಿಕೆ ನೀಡಿದೆ.
ಬಡ್ಡಿ ದರದಲ್ಲಿ ಕಡಿತಗೊಳಿಸಿ ಸಾಲ ಸೌಲಭ್ಯ ದೊರೆಯುವಂತೆ ಅವಕಾಶವನ್ನು ಒದಗಿಸಿಕೊಟ್ಟಿರುವುದಕ್ಕೆ ಕೇಂದ್ರ ಸರಕಾರವನ್ನು ಐಸಿಐಸಿಐ ಬ್ಯಾಂಕ್ ಮುಖ್ಯಸ್ಥ ಕೆ.ವಿ.ಕಾಮತ್ ಸ್ವಾಗತಿಸಿದ್ದಾರೆ.
ಪ್ಯಾಕೇಜ್ ಘೋಷಣೆಯಿಂದಾಗಿ ಆರ್ಥಿಕ ಕುಸಿತವನ್ನು ತಡೆದ ಉತ್ತಮ ವಹಿವಾಟಿನ ಭರವಸೆಯನ್ನು ಮೂಡಿಸಲಿದೆ ಎಂದು ಎಫ್‌ಐಸಿಸಿಐ ಪ್ರಧಾನ ಕಾರ್ಯದರ್ಶಿ ಅಮಿತ್ ಮಿಶ್ರಾ ತಿಳಿಸಿದ್ದಾರೆ.
ಎರಡನೇ ಉತ್ತೇಜನ ಪ್ಯಾಕೇಜ್ ಉತ್ತಮವಾಗಿದ್ದರೂ ನಿರೀಕ್ಷೆಗಿಂತ ಕಡಿಮೆಯಾಗಿದೆ. ಚೇಂಬರ್ 1 ಲಕ್ಷ ಕೋಟಿ ರೂ. ಪರಿಹಾರ ನಿರೀಕ್ಷಿಸಿತ್ತು ಎಂದು ಅಸೋಚಾಮ್ ಪ್ರಧಾನ ಕಾರ್ಯದರ್ಶಿ ಡಿ.ಎಸ್. ರಾವತ್ ಹೇಳಿದ್ದಾರೆ. |