ಖಾಸಗಿ ಕ್ಷೇತ್ರದ ಬ್ಯಾಂಕ್ ಆಫ್ ರಾಜಸ್ಥಾನ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.0.5 ರಷ್ಟು ಕಡಿತಗೊಳಿಸಿದ್ದು, ಜನೆವರಿ 5 ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್‌ನ ವಕ್ತಾರರು ತಿಳಿಸಿದ್ದಾರೆ.
ಒಂದು ವರ್ಷದ ಅವಧಿಯ ಠೇವಣಿಗೆ ವಾರ್ಷಿಕ ಬಡ್ಡಿ ದರ ಮೊದಲು ಶೇ.10.10ರಷ್ಟಾಗಿದ್ದು, ಬಡ್ಡಿ ದರ ಕಡಿತದ ನಂತರ ಶೇ.9.6ಕ್ಕೆ ಇಳಿಕೆಯಾಗಿದೆ ಎಂದು ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
15 ತಿಂಗಳ ಅವಧಿಯ ಠೇವಣಿಯಲ್ಲಿ ಮೊದಲು ಶೇ.10.35ರಷ್ಟಿದ್ದ ಬಡ್ಡಿ ದರ ಶೇ.10ಕ್ಕೆ ಇಳಿಕೆಯಾಗಿದೆ. ಹಿರಿಯ ನಾಗರಿಕರು ಠೇವಣಿಗಳ ಮೇಲೆ ಶೇ.0.5ರಷ್ಟು ಬಡ್ಡಿ ದರ ಹೆಚ್ಚಳವನ್ನು ಪಡೆಯಲಿದ್ದಾರೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ಶೇ.0.5 ರಷ್ಟು ಕ್ಯಾಶ್ ರಿಸರ್ವ್ ರೆಶಿಯೊವನ್ನು ಶೇ.0.5 ರಷ್ಟು ಕಡಿತಗೊಳಿಸಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ 20 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಠೇವಣಿಗಳ ಬಡ್ಡಿ ದರಗಳಲ್ಲಿ ಕಡಿತಗೊಳಿಸಿವೆ.
ಸರಕಾರಿ ಸ್ವಾಮ್ಯದ ಯುನಿಯನ್ ಬ್ಯಾಂಕ್ ಕೂಡಾ ನಿನ್ನೆ ಬ್ಯಾಂಕ್‌ನ ಎಲ್ಲ ವಿಧದ ಠೇವಣಿಗಳ ಮೇಲೆ ಶೇ.1.35 ರಷ್ಟು ಕಡಿತಗೊಳಿಸಿದೆ. ಮುಂದಿನ ವಾರದಲ್ಲಿ ಬಿಪಿಎಲ್‌ಆರ್ ದರ ಕಡಿತ ಮಾಡುವ ಸಾಧ್ಯತೆಗಳಿವೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ. |