ಚೀನಾ ಕೊಡುವ ದರದಷ್ಟೇ ವೆಚ್ಚದಲ್ಲಿ ವಸ್ತುಗಳನ್ನು ನಮಗೆ ಕೊಡಬೇಕೆಂದು ಅಮೆರಿಕಾ ಮತ್ತು ಬ್ರಿಟನ್ ಗ್ರಾಹಕರು ನಿರೀಕ್ಷೆ ಮಾಡುವುದರಿಂದ ಮುಂದಿನ 6 ತಿಂಗಳಲ್ಲಿ ಭಾರತದ ರಫ್ತು ಪ್ರಮಾಣ ತೀವ್ರ ಕುಸಿತವಾಗಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
"ಚೀನಾದ ಆಕ್ರಮಣಕಾರಿ ದರ ಸಮರದಿಂದ ಭಾರತೀಯ ರಫ್ತುದಾರರು ಕೂಡ ಅದೇ ಹಾದಿ ತುಳಿಯಲು ಯತ್ನಿಸುತ್ತಿದ್ದಾರೆ. ಗ್ರಾಹಕರ ಬೇಡಿಕೆ ಈ ನಿಟ್ಟಿನಲ್ಲಿರುವುದರಿಂದ ಭಾರತಕ್ಕೆ ಹೊಡೆತ ಬೀಳಲಿದೆ. ಚೀನಾ ಕೊಡುವ ದರದಲ್ಲಿ ಭಾರತ ವಸ್ತುಗಳನ್ನು ರಫ್ತು ಮಾಡಲಾಗದಿದ್ದಾಗ ಬೇಡಿಕೆ ಕುಸಿಯುತ್ತದೆ. ಇದು ಬಹುಶಃ ಆರು ತಿಂಗಳಲ್ಲಿ ನಡೆಯಬಹುದು" ಎಂದು ಸುಮಾರು 367 ರಫ್ತುವಹಿವಾಟುದಾರರನ್ನು ಸಂಪರ್ಕಿಸಿ ಸಮೀಕ್ಷೆ ನಡೆಸಿದ ನಂತರ ಎಫ್‌ಐಸಿಸಿಐ ಹೇಳಿದೆ.
ದೇಶದ ರಫ್ತು ಪ್ರಮಾಣ 2008-09ರ ಆರಂಭದ ಆರು ತಿಂಗಳಿನಲ್ಲಿ 30.9 ಸರಾಸರಿ ದಾಖಲಿಸಿತ್ತು. ನಂತರದ ಅವಧಿಯಲ್ಲಿ ಐದು ವರ್ಷಗಳ ನಂತರ ಪ್ರಪ್ರಥಮ ಬಾರಿಗೆ 12.1 ಸರಾಸರಿಗೆ ಕುಸಿದು ಚಿಂತಾಜನಕ ಸ್ಥಿತಿ ತಲುಪಿದೆ. ಅಕ್ಟೋಬರ್‌ನಲ್ಲಿ ಕಂಡು ಬಂದ ಈ ಬೆಳವಣಿಗೆ ನವೆಂಬರ್‌ನಲ್ಲಿ ಕೂಡ ಮುಂದುವರಿಯಿತು. ಇದರಿಂದಾಗಿ ರಫ್ತು ವಹಿವಾಟು ಕಳೆದ ವರ್ಷದ 12.7 ಬಿಲಿಯನ್‌ನಿಂದ 11.5 ಬಿಲಿಯನ್‌ಗೆ ಕುಸಿದಿದೆ.
|