ಸಾಗರೋತ್ತರ ಕಾರ್ಯಾಚರಣೆಯನ್ನು ವಿಸ್ತರಿಸಿದ ಉದ್ಯಮಿ ವಿಜಯ್ ಮಲ್ಯ ನೇತೃತ್ವದ ಕಿಂಗ್‌ಫಿಶರ್ ಏರ್‌ಲೈನ್ಸ್ ,ಪ್ರತಿನಿತ್ಯ ಮುಂಬೈನಿಂದ ಲಂಡನ್‌ಗೆ ತಡೆ ರಹಿತ ವಿಮಾನ ಸಂಚಾರವನ್ನು ಆರಂಭಿಸಲಿದೆ. ಸೋಮವಾರದಿಂದ ಮುಂಬೈನಿಂದ ಲಂಡನ್‌ಗೆ ನೇರ ವಿಮಾನ ಹಾರಾಟ ಆರಂಭಿಸಲಿದೆ ಎಂದು ಕಿಂಗ್‌ಫಿಶರ್ ಏರ್‌ಲೈನ್ಸ್ ವಕ್ತಾರರು ತಿಳಿಸಿದ್ದಾರೆ.ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಿಂಗ್‌ಫಿಶರ್ ಸಾಗರೋತ್ತರ ಹಾರಾಟವನ್ನು ವಿಸ್ತರಿಸಿದ್ದು, ಬೆಂಗಳೂರಿನಿಂದ ಲಂಡನ್‌ಗೆ ನೇರ ವಿಮಾನ ಸೌಲಭ್ಯ ಒದಗಿಸಿದ ನಂತರ ಎರಡನೇಯ ಬಾರಿಗೆ ಮುಂಬೈನಿಂದ ಲಂಡನ್‌ಗೆ ನೇರ ವಿಮಾನ ಸೌಲಭ್ಯ ಒದಗಿಸಿದೆ. ಮುಂಬೈನಿಂದ ಲಂಡನ್‌ಗೆ ನೂತನ್ ಏರ್‌ಬಸ್330-200 ಬ್ರ್ಯಾಂಡ್ ನಿಯೋಜಿಸಿದ್ದು, ಕಿಂಗ್‌ಫಿಶರ್ ಫಸ್ಟ್ ಮತ್ತು ಕಿಂಗ್‌ಫಿಶರ್ ಕ್ಲಾಸ್‌ಗಳಾಗಿ ವಿಂಗಡಿಸಲಾಗಿದೆ. ಮುಂಬೈನಿಂದ ಮಧ್ಯಾಹ್ನ 1.50ಕ್ಕೆ ನಿರ್ಗಮಿಸುವ ವಿಮಾನ ಲಂಡನ್‌ನ ಹಿತ್ರೋ ವಿಮಾನ ನಿಲ್ದಾಣವನ್ನು ಸಂಜೆ 5.55ಕ್ಕೆ ತಲುಪಲಿದೆ ಎಂದು ವಕ್ತಾರರು ತಿಳಿಸಿದ್ದಾರೆ. |