ಕೇಂದ್ರ ಸರಕಾರದ ಎರಡನೇ ಪ್ಯಾಕೇಜ್ ಘೋಷಣೆ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ರೆಪೊ, ರಿವರ್ಸ್ ರೆಪೊ ದರ ಕಡಿತದಿಂದಾಗಿ ಶೇರುಪೇಟೆ ಏರಿಕೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರಿಗೆ 38 ಪೈಸೆ ಏರಿಕೆ ಕಂಡಿದೆ. ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಪ್ರತಿ ಡಾಲರ್‌ಗೆ 48.20 ರೂಪಾಯಿಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ 38 ಪೈಸೆ ಏರಿಕೆ ಕಂಡಿದ್ದರಿಂದ ಪ್ರತಿ ಡಾಲರ್‌ಗೆ 48.58/60 ರೂಪಾಯಿಗಳಿಗೆ ತಲುಪಿದೆ.ನೇರ ವಿದೇಶ ಬಂಡವಾಳದ ಒಳಹರಿವಿನಲ್ಲಿ ಹೆಚ್ಚಳದಿಂದಾಗಿ ದೇಶಿಯ ಶೇರುಪೇಟೆ ಚೇತರಿಕೆ ಕಂಡಿದ್ದು, ಸರಕಾರದ ಪ್ಯಾಕೇಜ್ ಮತ್ತು ಆರ್‌ಬಿಐನಿಂದ ರೆಪೊ ದರಗಳ ಕಡಿತ ಮಾರುಕಟ್ಟೆಯ ಮೇಲೆ ಸಕರಾತ್ಮಕ ಪರಿಣಾಮಗಳು ಬೀರಿವೆ ಎಂದು ಫಾರೆಕ್ಸ್ ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ. |