ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಧ್ಯ ಪ್ರಾಚ್ಯ ರಾಷ್ಟ್ರಗಳ ಬಿಕ್ಕಟ್ಟು:ತೈಲ ದರ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಧ್ಯ ಪ್ರಾಚ್ಯ ರಾಷ್ಟ್ರಗಳ ಬಿಕ್ಕಟ್ಟು:ತೈಲ ದರ ಏರಿಕೆ
PTI
ಗಾಜಾ ಪಟ್ಟಿಯ ಮೇಲೆ ಇಸ್ರೆಲ್‌ ಮಾರಕ ಸೇನಾದಾಳಿ ನಡೆಸಿದ ಹಿನ್ನೆಲೆಯಲ್ಲಿ ತೈಲ ಸರಬರಾಜು ಕಡಿತಗೊಳಿಸುವಂತೆ ಇರಾನ್‌ನ ಮಿಲಿಟರಿ ಕಮಾಂಡರ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಹಾಗೂ ರಷ್ಯಾ ಮತ್ತು ಉಕ್ರೇನ್ ಮಧ್ಯೆ ಅನಿಲ್ ಸರಬರಾಜು ಕುರಿತಂತೆ ಬಿಕ್ಕಟ್ಟು ಎದುರಾಗಿದ್ದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 47ಡಾಲರ್‌‌ಗಳಿಗೆ ತಲುಪಿದೆ.

ಒಪೆಕ್ ಪ್ರತಿ ದಿನ 3500 ಮಿಲಿಯನ್ ಬ್ಯಾರೆಲ್‌ಗಳ ಕಡಿತ ಘೋಷಿಸಿದ್ದು ಹಾಗೂ ಅಮೆರಿಕದ ಇಂಧನ ವಿಭಾಗ ತುರ್ತುಪರಿಸ್ಥಿತಿಯ ಸಂದರ್ಭಗಳಿಗಾಗಿ ಕಚ್ಚಾ ತೈಲ ಮೀಸಲು ಸಂಗ್ರಹಣೆಯನ್ನು ಬಲಯುತವಾಗಿ ಆರಂಭಿಸಿದ್ದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಏರಿಕೆಯಾಗಿದೆ.

ಅಮೆರಿಕದಲ್ಲಿ ಫೆಬ್ರವರಿ ತಿಂಗಳ ಸರಬರಾಜಿನಲ್ಲಿ 86 ಸೆಂಟ್‌ಗಳ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 48.68 ಡಾಲರ್‌ಗಳಿಗೆ ತಲುಪಿದೆ.

ಕಳೆದ ವಾರದಲ್ಲಿ ರಷ್ಯಾ ಮತ್ತು ಉಕ್ರೇನ್ ಮಧ್ಯೆ ಉಂಟಾದ ಅನಿಲ ಸರಬರಾಜು ಬಿಕ್ಕಟ್ಟು ಹಾಗೂ ಒಪೆಕ್ ಸದಸ್ಯ ರಾಷ್ಟ್ರಗಳಿಂದ ತೈಲ ಉತ್ಪಾದನೆ ಕಡಿತ ಮತ್ತು ಇಸ್ರೆಲ್ ಯುದ್ಧ ಘೋಷಣೆಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಏರಿಕೆಗೆ ಕಾರಣವಾಗಿದೆ ಎಂದು ತೈಲ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ಬಲವರ್ಧನೆ
ಕಿಂಗ್‌ಫಿಶರ್‌:ಮುಂಬೈ-ಲಂಡನ್‌ಗೆ ನೇರ ವಿಮಾನ
ಆರ್‌ಕಾಂನಿಂದ ಜಿಎಸ್‌ಎಂ ಸೇವೆ ಆರಂಭ
ಇನ್ನಾರು ತಿಂಗಳಲ್ಲಿ ರಫ್ತು ಚಿಂತಾಜನಕ: ಸಮೀಕ್ಷೆ
ಬ್ಯಾಂಕ್‌ಗಳಿಂದ ಠೇವಣಿ ಬಡ್ಡಿ ದರ ಕಡಿತ ಘೋಷಣೆ
2ನೇ ಪ್ಯಾಕೇಜ್ ಘೋಷಣೆ:ಅಸೋಚಾಮ್ ಸ್ವಾಗತ