ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಿಎಸ್‌ಎಂ ಸೇವೆ ಶೀಘ್ರದಲ್ಲಿ ಆರಂಭ: ಟಾಟಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಎಸ್‌ಎಂ ಸೇವೆ ಶೀಘ್ರದಲ್ಲಿ ಆರಂಭ: ಟಾಟಾ
ಶೀಘ್ರದಲ್ಲಿ ಜಿಎಸ್‌ಎಂ ಸೇವೆಯನ್ನು ಆರಂಭಿಸಲಾಗುವುದು ಎಂದು ಟಾಟಾ ಟೆಲಿ ಸರ್ವಿಸಸ್ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಸರಡಾನಾ ತಿಳಿಸಿದ್ದಾರೆ.

ಸಿಡಿಎಂಎ ಮತ್ತು ಜಿಎಸ್‌ಎಂ ಸೇವೆಗಳ ಎರಡು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶದ ಏಕೈಕ ಟೆಲಿಕಾಂ ಕಂಪೆನಿಯಾದ ರಿಲಯನ್ಸ್ ಕಮ್ಯೂನಿಕೇಶನ್ಸ್ ಕಳೆದ ವಾರ ಜಿಎಸ್‌ಎಂ ಸೇವೆಯನ್ನು ಆರಂಭಿಸಿದ ಹಿನ್ನೆಲೆಯಲ್ಲಿ ಟಾಟಾ ಇಂಡಿಕಾಂ ಕೂಡಾ ಶೀಘ್ರದಲ್ಲಿ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ.

ಮುಂಬರುವ ಒಂದೆರಡು ತಿಂಗಳಲ್ಲಿ ಸ್ಪೆಕ್ಟ್ರಂಗಳ ಅನುಮತಿ ದೊರೆಯಲಿದ್ದು ನಂತರ ಜಿಎಸ್‌ಎಂ ಸೇವೆಗಳನ್ನು ಆರಂಭಿಸಿಲು ನಿರ್ಧರಿಸಿದೆ ಎಂದು ಟಾಟಾ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಸರಡಾನಾ ತಿಳಿಸಿದ್ದಾರೆ.

ರಿಲಯನ್ಸ್ ಕಮ್ಯೂನಿಕೇಶನ್ಸ್ ದೇಶದಾದ್ಯಂತ 11 ಸಾವಿರ ಪಟ್ಟಣಗಳಿಗೆ ಜಿಎಸ್‌ಎಂ ಸೇವೆಯನ್ನು ಆರಂಭಿಸಿದ್ದು,ಮುಂಬರುವ ಕೆಲ ತಿಂಗಳುಗಳಲ್ಲಿ 22 ಸಾವಿರ ಪಟ್ಟಣಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ.

ಟಾಟಾ ಟೆಲಿ ಸರ್ವಿಸಸ್ ಪ್ರಸ್ತುತ ದೇಶದಲ್ಲಿ 32 ಮಿಲಿಯನ್ ಗ್ರಾಹಕರನ್ನು ಹೊಂದಿದೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಗತ್ತಿನಲ್ಲಿ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಭಾರತ
ಮಧ್ಯ ಪ್ರಾಚ್ಯ ರಾಷ್ಟ್ರಗಳ ಬಿಕ್ಕಟ್ಟು:ತೈಲ ದರ ಏರಿಕೆ
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ಬಲವರ್ಧನೆ
ಕಿಂಗ್‌ಫಿಶರ್‌:ಮುಂಬೈ-ಲಂಡನ್‌ಗೆ ನೇರ ವಿಮಾನ
ಆರ್‌ಕಾಂನಿಂದ ಜಿಎಸ್‌ಎಂ ಸೇವೆ ಆರಂಭ
ಇನ್ನಾರು ತಿಂಗಳಲ್ಲಿ ರಫ್ತು ಚಿಂತಾಜನಕ: ಸಮೀಕ್ಷೆ