ರತನ್ ಟಾಟಾ ಸಂಚಾಲಿತ ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್ , ಟಾಟಾ ಸ್ಟೀಲ್ ಮತ್ತು ಟಾಟಾ ಪವರ್ ಶೇರುಗಳು ಶೇರುಪೇಟೆಯಲ್ಲಿ ಚೇತರಿಕೆ ಕಂಡಿದ್ದರಿಂದ ದೇಶದ ಬಹುಮೌಲ್ಯದ ಕಾರ್ಪೋರೇಟ್ ಕಂಪೆನಿಗಳಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ. ಸೋಮವಾರದ ಶೇರುಪೇಟೆಯ ಮುಕ್ತಾಯದ ಹಂತದಲ್ಲಿ, ಟಾಟಾ ಗ್ರೂಪ್ ಕಂಪೆನಿಗಳ ಒಟ್ಟು ದಿನದ ವಹಿವಾಟು 1,35,000 ಕೋಟಿ ರೂ.ಗಳಾಗಿದ್ದು,4000 ಕೋಟಿ ರೂ.ಗಳ ಏರಿಕೆ ಕಂಡಿದೆ.ಎರಡನೇ ಸ್ಥಾನದಲ್ಲಿದ್ದ ಭಾರ್ತಿ ಏರ್‌ಟೆಲ್ 1,30,100 ಕೋಟಿ ರೂ.ಗಳ ವಹಿವಾಟು ನಡೆಸಿ 3000 ಕೋಟಿ ರೂ.ಗಳ ನಷ್ಟ ಅನುಭವಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ ಸೋಮವಾರದ ವಹಿವಾಟಿನಲ್ಲಿ ಮೊದಲ ಸ್ಥಾನದಲ್ಲಿದ್ದು 2,45,000ಕೋಟಿ ರೂ.ಗಳ ವಹಿವಾಟು ನಡೆಸಿದೆ. ಅನಿಲ್ ಅಂಬಾನಿ ಸಂಚಾಲಿತ ರಿಲಯನ್ಸ್ ಗ್ರೂಪ್ 1,20,000 ಕೋಟಿ ರೂ.ಗಳ ವಹಿವಾಟು ನಡೆಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. |