ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪಾದಕ ವಸ್ತುಗಳಿಗೆ ಕಡಿಮೆ ಖರೀದಿದಾರರು ಲಭ್ಯವಿರುವುದರಿಂದ ಮುಂಬರುವ ಮಾರ್ಚ್ ತಿಂಗಳ ವೇಳೆಗೆ ರಫ್ತು ಕ್ಷೇತ್ರದಲ್ಲಿರುವ 50 ಲಕ್ಷ ಮಂದಿ ಉದ್ಯೋಗಿಗಳು ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ ತಿಂಗಳಾಂತ್ಯದವರೆಗೆ ರಫ್ತು ವಹಿವಾಟು ಕ್ಷೇತ್ರದಲ್ಲಿ 50 ಲಕ್ಷ ಮಂದಿ ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ಫೆಡರೇಶನ್ ಆಫ್ ಇಂಡಿಯನ್ ಎಕ್ಸಪೋರ್ಟ್ ಆರ್ಗನೈಜೇಶನ್ ಅಧ್ಯಕ್ಷ ಎ.ಶಕ್ತಿವೇಲ್ ತಿಳಿಸಿದ್ದಾರೆ.
ದೇಶದ ಒಟ್ಟು ಉತ್ಪನ್ನದಲ್ಲಿ ಶೇ.20 ರಷ್ಟು ಮಾತ್ರ ರಫ್ತು ವಹಿವಾಟು ನಡೆಸುತ್ತಿದ್ದು, ಹೆಚ್ಚಿನ ಕಾರ್ಮಿಕರ ಅಗತ್ಯತೆಯಿಂದಾಗಿ 150 ಮಿಲಿಯನ್ ಉದ್ಯೋಗಿಗಳು ರಫ್ತು ಕ್ಷೇತ್ರವನ್ನು ಅವಲಂಬಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರಸಕ್ತ ವರ್ಷದ ಆರಂಭದ ಆರು ತಿಂಗಳಿನಲ್ಲಿ ಶೇ.30.9 ರಷ್ಟು ರಫ್ತು ವಹಿವಾಟಿನಲ್ಲಿ ಹೆಚ್ಚಳವಾಗಿದ್ದು,ಅಕ್ಟೋಬರ್ ತಿಂಗಳಿನಲ್ಲಿ ರಫ್ತು ವಹಿವಾಟು ಶೇ.12.1ಕ್ಕೆ ಇಳಿಕೆಯಾಗಿದೆ ಎಂದು ಎಫ್‌ಐಇಒ ಅಧ್ಯಕ್ಷ ಶಕ್ತಿವೇಲು ತಿಳಿಸಿದ್ದಾರೆ. |