ಸೌದಿ ಅರೇಬಿಯಾದ ಪೂರ್ವಿಯ ಪ್ರಾಂತ್ಯದಲ್ಲಿ ಐದು ತೈಲ ಕ್ಷೇತ್ರಗಳು ಹಾಗೂ ಮೂರು ಅನಿಲ ಕ್ಷೇತ್ರಗಳು ಪತ್ತೆ ಮಾಡಲಾಗಿದೆ ಎಂದು ಪೆಟ್ರೋಲಿಯಂ ಮತ್ತು ಅದಿರು ಮೂಲಗಳ ಖಾತೆ ಸಚಿವ ಅಲಿ ಅಲ್ -ನೈಮಿ ಹೇಳಿದ್ದಾರೆ.
ಐದು ತೈಲ ಬಾವಿಗಳಲ್ಲಿ ನಾಲ್ಕು ಬಾವಿಗಳಿಗೆ ಜಾವೊಫ್-2, ರಾಮ್‌ಠಾನ್ -9, ನಯಾಶಿನ್ -1,ಜಾರಿದ್ -101 ಮತ್ತು ಖೊರ್ಸಾನಿಯಾ-114 ಎಂದು ನಾಮಕರಣ ಮಾಡಲಾಗಿದೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ.
ಜಾವೊಫ್-2 ಧಾಹರನ್‌ನಿಂದ 300 ಕಿ.ಮಿ.ದೂರದ ಆಗ್ನೆಯ ಭಾಗದಲ್ಲಿದ್ದು, ಪ್ರತಿ ದಿನ 2,551 ಬ್ಯಾರೆಲ್ ತೈಲ ಹಾಗೂ 1.2 ಮಿಲಿಯನ್ ಕ್ಯೂಬಿಕ್ ಅಡಿ ಅನಿಲವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಮ್‌ಠಾನ್-9 ಧಾಹರನ್‌ನಿಂದ 400 ಕಿ.ಮಿ. ದೂರದ ಆಗ್ನೆಯ ಭಾಗದಲ್ಲಿದ್ದು ,ನಯಾಶಿನ್ -1 ರಾಮ್‌ಠಾನ್‌ನಿಂದ 60 ಕಿ.ಮಿ.ದೂರದಲ್ಲಿದೆ ಎಂದು ಸಚಿವ ಅಲ್ ನೈಮಿ ತಿಳಿಸಿದ್ದಾರೆ. |