ಏರ್‌ಟೆಲ್ ಮತ್ತು ರಿಸರ್ಚ್ ಇನ್ ಮೊಶನ್ ಕಂಪೆನಿಗಳು ಬ್ಲ್ಯಾಕ್‌ಬೆರ್ರಿ ಪೀಯರ್ಲ್ ಫ್ಲಿಪ್‌ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ನಾಳೆ ಬಿಡುಗಡೆ ಮಾಡಲಿದ್ದು, 21,990 ಮೂಲದರವನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಬ್ಲ್ಯಾಕ್ ಬೆರ್ರಿ ಪೀಯರ್ಲ್ ಫ್ಲಿಫ್ 8220 ಸ್ಮಾರ್ಟ್‌ಫೋನ್‌ನಲ್ಲಿ ಸುಲಭ ಟೈಪಿಂಗ್ ಮತ್ತು ಡಯಲಿಂಗ್ ಹೆಚ್ಚುವರಿ ಡಿಸ್‌ಪ್ಲೇನಲ್ಲಿ ಕ್ಯಾಲೆಂಡರ್, ಇ-ಮೇಲ್,ಟೆಕ್ಟ್ ಸಂದೇಶಗಳು ಮತ್ತು ಫೋನ್ ಕರೆಗಳು ಸೌಲಭ್ಯಗಳನ್ನು ಅಳಡಿಸಲಾಗಿವೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಲ್ಯಾಕ್ ಬೆರ್ರಿ ಪೀಯರ್ಲ್ ಫ್ಲಿಫ್ 8220 ಸ್ಮಾರ್ಟ್‌ಫೋನ್ ಶಕ್ತಿಯುತವಾಗಿದ್ದು, ಕಾಂಪ್ಯಾಕ್ಟ್ ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಸೌಲಭ್ಯಗಳು ಅಡಕವಾಗಿವೆ ಎಂದು ಏರ್‌ಟೆಲ್ ಮೊಬೈಲ್ ಸರ್ವಿಸಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಸಂಜಯ್ ಗುಪ್ತಾ ತಿಳಿಸಿದ್ದಾರೆ.
ರಿಮ್‌ನ ಶಕ್ತಿಯುತ ಇ-ಮೇಲ್ ಸೌಲಭ್ಯ, ಮಲ್ಟಿಮೀಡಿಯಾಗಳು ಸಂದೇಶ ಪಟ್ಟಿ, ಪಿಕ್ಚರ್ ಮ್ಯಾಸೆಜಿಂಗ್‌ಗಳಿಗೆ ಬೆಂಬಲ ನೀಡುತ್ತದೆ.ಶೀಘ್ರದಲ್ಲಿ ಇ-ಮೇಲ್ ರವಾನೆ ಮಾಡುವಂತಹ ಸೌಲಭ್ಯಗಳಿರುವುದರಿಂದ ಕಾರ್ಯನಿರತ ವ್ಯಕ್ತಿಗಳಿಗೆ ಉಪಯುಕ್ತವಾಗಲಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. |