ಮೆಟಾಸ್ ಕಂಪೆನಿಗಳ ಸ್ವಾಧೀನ ಕುರಿತಂತೆ ವಿವಾದ ಉಲ್ಬಣಿಸಿದ ಹಿನ್ನೆಲೆಯಲ್ಲಿ, ಸತ್ಯಂ ಕಂಪ್ಯೂಟರ್ಸ್ ಮುಖ್ಯಸ್ಥ ಬಿ.ರಾಮಲಿಂಗಾರಾಜು ರಾಜೀನಾಮೆ ನೀಡಿದ್ದಾರೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ರಾಮಲಿಂಗಾರಾಜು ಕಂಪೆನಿಯ ಅಡಳಿತ ಮಂಡಳಿಗೆ ಪತ್ರ ಬರೆದು, ತಾವು ಸತ್ಯಂ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದರಿಂದ ಕಂಪೆನಿಯ ಉಳಿತಾಯ ಖಾತೆಯಲ್ಲಿ 5040 ಕೋಟಿ ರೂ.ಗಳಿವೆ ಎಂದು ಅಡಳಿತ ಮಂಡಳಿಗೆ ಆರ್ಥಿಕ ವಿವರಗಳನ್ನು ನೀಡಿದ್ದಾರೆ . ಪ್ರಸಕ್ತ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಸತ್ಯಂ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ಆದರೆ ಕಂಪೆನಿಯ ಅಡಳಿತ ಮಂಡಳಿಯ ವಿಸ್ತರಣೆಯಾಗುವವರೆಗೆ ಮಾತ್ರ ನಾನು ಸಿಇಒ ಹುದ್ದೆಯಲ್ಲಿ ಮುಂದುವರಿಯುತ್ತೇನೆ. ಮಂಡಳಿಗೆ ಅಗತ್ಯವಾದ ಸಹಕಾರ ನೀಡಲು ಕೆಲ ದಿನಗಳವರೆಗೆ ಅವಕಾಶ ಲಭ್ಯವಾಗುತ್ತದೆ ಎಂದು ರಾಮಲಿಂಗಾರಾಜು ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಂಪೆನಿಯನ್ನು ಉನ್ನತ ಮಟ್ಟಕ್ಕೆಏರಿಸುವಲ್ಲಿ ಮಹತ್ತರ ಪಾತ್ರವಹಿಸಿದ ಸತ್ಯಂ ಮುಖ್ಯಸ್ಥ ರಾಮಲಿಂಗಾರಾಜು ಅವರು ರಾಜೀನಾಮೆ ನೀಡಿರುವುದು ಆಘಾತ ತಂದಿದೆ ಎಂದು ಇಂಡಿಯಾ ಇನ್ಫೋಲೈನ್ ಮುಖ್ಯಸ್ಥ ನಿರ್ಮಲ್ ಜೈನ್ ಹೇಳಿದ್ದಾರೆ. |