ಲಾರಿ ಮಾಲೀಕರು ಹಾಗೂ ಕೇಂದ್ರ ಸರಕಾರ ತಮ್ಮ ತಮ್ಮ ನಿಲುವುಗಳಿಗೆ ಬದ್ದವಾದ ಹಿನ್ನೆಲೆಯಲ್ಲಿ ಲಾರಿ ಮುಷ್ಕರ ಸತತ ಮೂರನೇ ದಿನಕ್ಕೆ ಕಾಲಿರಿಸಿದೆ.
ಅಗತ್ಯ ವಸ್ತುಗಳ ಸರಬರಾಜಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೇ ರೈಲ್ವೆ ಇಲಾಖೆಗೆ ಅಗತ್ಯ ವಸ್ತುಗಳನ್ನುಸಾಗಾಣಿಕೆ ಜವಾಬ್ದಾರಿಯನ್ನು ಹೊರಿಸಲಾಗಿದ್ದು, ತಮ್ಮ ಬೇಡಿಕೆಗಳು ಈಡೇರುವವರೆಗೆ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಲಾರಿ ಮಾಲೀಕರು ಸ್ಫಷ್ಟಪಡಿಸಿದ್ದಾರೆ.
ಡೀಸೆಲ್ ಹಾಗೂ ಪೆಟ್ರೋಲ್ ದರಗಳ ಏರಿಕೆ ಹಾಗೂ ಸಾಗಾಣಿಕೆ ದರಗಳನ್ನುಸರಕಾರ ಪರಿಷ್ಕರಣೆ ಮಾಡದೇ ಇರುವುದರಿಂದ, ಪ್ರತಿ ದಿನ ಭಾರಿ ನಷ್ಟವನ್ನು ಅನುಭವಿಸುತ್ತಿದ್ದು, ಬೇಡಿಕೆಗಳನ್ನು ಸರಕಾರ ಈಡೇರಿಸುವವರೆಗೆ ಲಾರಿ ಮುಷ್ಕರವನ್ನು ಹಿಂದಕ್ಕೆ ಪಡೆಯಲಾಗುವುದಿಲ್ಲ ಎಂದು ಆಲ್ ಇಂಡಿಯಾ ಮೋಟಾರ್ಸ್ ಟ್ರಾನ್ಸಪೋರ್ಟ್ ಕಾಂಗ್ರೆಸ್ ಅಧ್ಯಕ್ಷ ಚರಣ್ ಸಿಂಗ್ ಲೋಹಾರಾ ತಿಳಿಸಿದ್ದಾರೆ. |