ಬಹಿರಂಗವಾದ ಸತ್ಯಂ ಹಗರಣ ಶೇರುಪೇಟೆಯನ್ನು ದಿಗಿಲುಗೊಳಿಸಿದೆ ಎಂದು ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾದ ಸೆಬಿ ಆಶ್ಚರ್ಯ ವ್ಯಕ್ತಪಡಿಸಿದ್ದು, ಕಾನೂನಿನಡಿಯಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸರಕಾರ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದೆ.
ಕಾರ್ಪೋರೇಟ್ ವ್ಯವಹಾರಗಳ ಸಚಿವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸೆಬಿ ಹಾಗೂ ಕಾನೂನಿನಡಿಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚಿಸಲಾಗುತ್ತಿದೆ ಎಂದು ಸೆಬಿ ಮುಖ್ಯಸ್ಥ ಸಿ.ಬಿ.ಭಾವೆ ಹೇಳಿದ್ದಾರೆ.
ಸತ್ಯಂ ಮುಖ್ಯಸ್ಥ ಸಲ್ಲಿಸಿದ ರಾಜೀನಾಮೆ ಪತ್ರ ಹಾಗೂ ಅವ್ಯವಹಾರಗಳನ್ನು ಸಮರ್ಥಿಸಿಕೊಂಡ ಕುರಿತಂತೆ ವಿವರಣೆಗಳನ್ನು ಕಾರ್ಪೋರೇಟ್ ಸಚಿವರಿಗೆ ಸೆಬಿ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ. |