ದೇಶದ 14 ತೈಲ ಕಂಪೆನಿಗಳ 55 ಸಾವಿರ ಅಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಕಾರ್ಯಾಚರಣೆಯಲ್ಲಿ ಅಡ್ಡಿ ಎದುರಾಗಿವೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.ತೈಲ ಅಧಿಕಾರಿಗಳ ಮುಷ್ಕರದಿಂದಾಗಿ ದೇಶಿಯ ಹಾರಾಟ ನಡೆಸುವ ನಾಲ್ಕು ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ. ಸರಾಸರಿ ಪ್ರತಿಯೊಂದು ಏರ್ ಇಂಡಿಯಾ ವಿಮಾನ 25 ರಿಂದ 30 ನಿಮಿಷ ವಿಳಂಬವಾಗಿ ಹಾರಾಟ ನಡೆಸುತ್ತಿವೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ |