ಮುಂಬರುವ ಎರಡರಿಂದ ಮೂರು ವಾರಗಳಲ್ಲಿ ಅನಿಲ್ ಸಿಲಿಂಡರ್ ಸೇರಿದಂತೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕಡಿತಗೊಳಿಸುವುದಾಗಿ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಹೇಳಿದ್ದಾರೆ.ಮುಂದಿನ ಎರಡರಿಂದ ಮೂರು ವಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕಡಿತಗೊಳಿಸುವ ಪ್ರಯತ್ನದಲ್ಲಿದ್ದೇವೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ದರ ಇಳಿಕೆ ಪ್ರಮಾಣ ಕುರಿತಂತೆ ಸುದ್ದಿಗಾರರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದರ ಕಡಿತದ ಪ್ರಮಾಣದ ಬಗ್ಗೆ ನಿನ್ನು ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ದಾಖಲೆಯ ಪ್ರಮಾಣದಲ್ಲಿ ಇಳಿಕೆಯಾಗಿದ್ದರಿಂದ. ಕಳೆದ ಡಿಸೆಂಬರ್ 5 ರಂದು ಸರಕಾರ ಪೆಟ್ರೋಲ್‌ಗೆ 5 ರೂಪಾಯಿ ಹಾಗೂ ಡೀಸೆಲ್‌ಗೆ 2 ರೂಪಾಯಿ ಕಡಿತವನ್ನು ಘೋಷಿಸಿತ್ತು. ಅನಿಲ ಸಿಲಿಂಡರ್ ದರಗಳ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ದೇವ್ರಾ, ಪ್ರತಿ ಸಿಲಿಂಡರ್‌ಗೆ 20 ರಿಂದ 25 ರೂಪಾಯಿಗಳವರೆಗೆ ಇಳಿಕೆಯಾಗಬಹುದು ಎಂದು ತಿಳಿಸಿದ್ದಾರೆ. ಲಾರಿ ಮಾಲೀಕರ ಮುಷ್ಕರ ಕುರಿತಂತೆ ಅಸಮಧಾನ ವ್ಯಕ್ತಪಡಿಸಿದ ಸಚಿವ ದೇವ್ರಾ, ಕೆಲವರು ಲಾರಿ ಮಾಲೀಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು. |