ಸತ್ಯಂ ಕಂಪ್ಯೂಟರ್ಸ್ ಹಗರಣದ ಮಾಹಿತಿಗಳ ಬಗ್ಗೆ ತನಿಖೆ ನಡೆಸಿ ಮಾಹಿತಿಗಳು ನಿಜವೆಂದು ಸಾಬೀತಾದಲ್ಲಿ ಗಂಭೀರ ವಂಚನೆ ತನಿಖಾ ಕಚೇರಿ(ಎಸ್ಎಫ್ಐಒ)ಯ ಮೂಲಕ ಸರಕಾರ ಸೂಕ್ತ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವ ಪಿ.ಸಿ.ಗುಪ್ತಾ ಹೇಳಿದ್ದಾರೆ.
ತನಿಖೆಯಲ್ಲಿ ಸತ್ಯಂ ಹಗರಣದ ಮಾಹಿತಿಗಳ ಬಗ್ಗೆ ಪರಿಶೀಲನೆ ನಡೆಸಿದ ನಂತರ ಪ್ರಕರಣವನ್ನು ಗಂಭೀರ ವಂಚನೆ ತನಿಖಾ ಕಚೇರಿಗೆ ಶಿಫಾರಸು ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯಲ್ಲಿ ಆರ್ಥಿಕ ಅವ್ಯವಹಾರಗಳು ತನಿಖೆಯಲ್ಲಿ ಸತ್ಯವೆಂದು ಕಂಡುಬಂದಲ್ಲಿ ಕಾನೂನಿನಡಿಯಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಸಚಿವರು ಕಿಡಿಕಾರಿದ್ದಾರೆ.
ಕಾರ್ಪೋರೇಟ್ ಸಚಿವಾಲಯ ಶೇರುಪೇಟೆ ನಿಯಂತ್ರಕ ಸಂಸ್ಥೆಯಾದ ಸೆಬಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಹಕಾರ ಸಮನ್ವಯದೊಂದಿಗೆ ತನಿಖೆಯನ್ನು ನಡೆಸಲಾಗುವುದು ಎಂದು ಸಚಿವ ಪಿ.ಸಿ. ಗುಪ್ತಾ ತಿಳಿಸಿದ್ದಾರೆ. |