ಸತ್ಯಂ ಮುಖ್ಯಸ್ಥ ರಾಮಲಿಂಗಾರಾಜು ನಡೆಸಿದ ಆರ್ಥಿಕ ವಂಚನೆ ಕುರಿತಂತೆ ದಿಗ್ಭ್ರಮೆ ವ್ಯಕ್ತಪಡಿಸಿದ ನಾಸ್ಕಾಂ ಕಾರ್ಪೋರೇಟ್ ನಿರ್ವಹಣಾ ಕಚೇರಿಯ ವೈಫಲ್ಯವಾಗಿದೆ ಎಂದು ಆರೋಪಿಸಿದೆ.
ದೇಶದ ಆಟಿ-ಬಿಪಿಒ ಉದ್ಯಮ ಉತ್ತಮ, ಉನ್ನತ ಮೌಲ್ಯಗಳ ಇತಿಹಾಸವನ್ನು ಹೊಂದಿದ್ದು, ಇಂತಹ ಪ್ರಕರಣ ವಿಶೇಷವಾಗಿ ದುರದೃಷ್ಟಕರ ಸಂಗತಿಯಾಗಿದ್ದು, ಸರಕಾರ ಕಾನೂನಿನಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ನಾಸ್ಕಾಂ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಶೇರುದಾರರು ಸತ್ಯಂ ಪ್ರಕರಣವನ್ನು ಪ್ರತ್ಯೇಕವಾಗಿ ನೋಡುವ ಬಗ್ಗೆ ಖಾತರಿಯಿದ್ದು, ಕೈಗಾರಿಕೋದ್ಯಮ ಹಾಗೂ ಕಾರ್ಪೋರೇಟ್ ಜಗತ್ತಿನ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಹೇಳಿದೆ.
ಸತ್ಯಂ ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸಲು ಹಾಗೂ ಉದ್ಯೋಗಿಗಳಿಗೆ ಮಾರ್ಗದರ್ಶನ ನೀಡಲು ನಾಸ್ಕಾಂ, ಸತ್ಯಂನೊಂದಿಗೆ ಕಾರ್ಯನಿರ್ವಹಿಸಲು ಸಮ್ಮತಿಸಿತ್ತು. |