ಸಾಫ್ಟ್‌ವೇರ್ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಸತ್ಯಂ ಕಂಪ್ಯೂಟರ್ಸ್‌ನಂತಹ ಕಳಂಕಿತ ಕಂಪೆನಿಯನ್ನು ಖರೀದಿಸುವ ಯಾವುದೇ ಉದ್ದೇಶ ಹೊಂದಿಲ್ಲವೆಂದು ಇನ್ಫೋಸಿಸ್ ಹೇಳಿದೆ. ಸತ್ಯಂ ಸಂಸ್ಥೆಯನ್ನು ಖರೀದಿಸುವ ಉದ್ದೇಶವಿಲ್ಲ ಅದರಲ್ಲೂ ಕಳಂಕಿಂತ ಕಂಪೆನಿಯನ್ನು ಖರೀದಿಸುವುದು ಸಾಧ್ಯವೆ ಇಲ್ಲ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿ ಖಾಸಗಿ ಟಿ.ವಿ. ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.ಸತ್ಯಂ ವಿವಾದದಿಂದಾಗಿ ದೇಶಧ ಮಾಹಿತಿ ತಂತ್ರಜ್ಞಾನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಮೂರ್ತಿ ತಿಳಿಸಿದ್ದಾರೆ. ಪ್ರತಿಯೊಂದು ಕಂಪೆನಿಗಳು ಅದರಲ್ಲೂ ಬೃಹತ್ ಕಂಪೆನಿಗಳು ಗ್ರಾಹಕರೊಂದಿಗೆ ಆತ್ಮಿಯ ಸಂಬಂಧವನ್ನು ಹೊಂದಿರುತ್ತವೆ. ಭಾರತದ ಕೈಗಾರಿಕೋದ್ಯಮದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಹಿರಿಯ ವ್ಯವಸ್ಥಾಪನಾ ಮಂಡಳಿ ಮತ್ತು ಗ್ರಾಹಕ ಕಂಪೆನಿಗಳೊಂದಿಗೆ ವಿಶೇಷ ಮೈತ್ರಿಯಿರುತ್ತದೆ ಎಂದು ತಿಳಿಸಿದ್ದಾರೆ.ಗುಣಮಟ್ಟ, ಪ್ರಮಾಣಿಕತೆಯಿಂದಾಗಿ ಬೃಹತ್ ಪ್ರಮಾಣದ ವ್ಯವಹಾರ ನಡೆಸಲಾಗುತ್ತದೆ. ಆದರೆ ಸತ್ಯಂ ಮುಖ್ಯಸ್ಥರಂತಹ ಒಬ್ಬ ಕೆಟ್ಟ ವ್ಯಕ್ತಿಯಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ನಾಶವಾಗಲು ಸಾಧ್ಯವಿಲ್ಲ ಎಂದು ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. |