ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸತ್ಯಂ ಕಂಪ್ಯೂಟರ್ಸ್‌ನ 7 ಸಾವಿರ ಕೋಟಿ ರೂ.ಹಗರಣ ತನಿಖೆಗಾಗಿ ಹೈದ್ರಾಬಾದ್‌ಗೆ ತೆರಳಿದ್ದು, ಸತ್ಯಂ ಮುಖ್ಯಸ್ಥ ರಾಮಲಿಂಗಾರಾಜು ಪರಾರಿಯಾಗಿದ್ದು, ಹುಡುಕಾಟ ಅಸಾಧ್ಯವಾಗಿದೆ ಎಂದು ಹೇಳಿದೆ
ಸತ್ಯಂ ಮುಖ್ಯಸ್ಥ ರಾಜು 7 ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿರುವುದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಂಧನದ ಭೀತಿಯನ್ನು ಎದುರಿಸುತ್ತಿದ್ದು,ಏಳರಿಂದ ಹತ್ತು ವರ್ಷಗಳ ಶಿಕ್ಷೆಯನ್ನು ಅನುಭವಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಬಿ.ರಾಮಲಿಂಗಾರಾಜು ಹುಡುಕಾಟದಲ್ಲಿ ತೊಡಗಿರುವ ಪೊಲೀಸರಿಗೆ, ಸತ್ಯಂ ಅಡಳಿತ ಮಂಡಳಿ ರಾಜು ವಾಸಸ್ಥಾನದ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ತಳ್ಳಿಹಾಕಿದೆ
ಹೈದ್ರಾಬಾದ್ ವಿಮಾನನಿಲ್ದಾಣದಿಂದ ಬುಧವಾರ ಬೆಳಿಗ್ಗೆ ಟೆಕ್ಸಾಸ್‌ಗೆ ತೆರಳಿದ್ದಾರೆ ಎಂದು ಹೈದ್ರಾಬಾದ್ ಪೊಲೀಸರು ತಿಳಿಸಿದ್ದಾರೆ. ಆರ್ಥಿಕ ವಂಚನೆಯನ್ನು ಒಪ್ಪಿಕೊಂಡ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಮರೆಯಾಗಿದ್ದಾರೆ. ಆದರೆ ಖಾಸಗಿ ಟಿ.ವಿ. ಮೂಲಗಳ ಪ್ರಕಾರ ರಾಜು ಟೆಕ್ಸಾಸ್‌ಗೆ ತೆರಳಿದ್ದಾರೆ.
ಬ್ರಿಟಿಷ್ ಟೆಲಿಕಾಂ ಸಲ್ಯೂಶನ್ಸ್ ಸಂಸ್ಥೆ ಮತ್ತು ಮೆಟಾಸ್ ಮಧ್ಯೆ ಪ್ರಕರಣ ನೆನೆಗುದಿಯಲ್ಲಿದ್ದು, ಸತ್ಯಂ ಮುಖ್ಯಸ್ಥ ರಾಜು ಹಾಗೂ ಹಿರಿಯ ವಿರ್ದೇಶಕರು ವಿಚಾರಣೆ ಸಂದರ್ಭದಲ್ಲಿ ಉಪಸ್ಥಿತರಿರಬೇಕು ಎಂದು ಬ್ರಿಟನ್ ಟೆಲಿಕಾಂ ವಕೀಲರು ಒತ್ತಾಯಿಸಿದ್ದಾರೆ.
ಮತ್ತೊಂದು ಮೂಲಗಳ ಪ್ರಕಾರ ರಾಜು, ದುಬೈಗೆ ತೆರಳಿದ್ದಾರೆ ಎನ್ನುವ ಉಹಾಪೋಹಗಳಿದ್ದು, ರಾಜು ಮೊಬೈಲ್ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. |