ಭಾರತದ ಕಾರ್ಪೋರೇಟ್ ಜಗತ್ತು ಹಾಗೂ ಹೂಡಿಕೆದಾರರನ್ನು ತಲ್ಲಣಗೊಳಿಸಿದ ಸತ್ಯಂ ಮುಖ್ಯಸ್ಥ ರಾಮಲಿಂಗಾರಾಜು , 7 ಸಾವಿರ ಕೋಟಿ ರೂ. ವಂಚನೆಗೈದ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕದಲ್ಲಿ ಕಾರಾಗ್ರಹ ಶಿಕ್ಷೆಯನ್ನು ಅನುಭವಿಸಬೇಕಾಗಿದೆ.ಕಾನೂನು ತಜ್ಞರ ಪ್ರಕಾರ, ನಕಲಿ ದಾಖಲೆ ಸೃಷ್ಟಿ, ಆರ್ಥಿಕ ವಂಚನೆಗಳಿಗಾಗಿ ಸತ್ಯಂ ಮುಖ್ಯಸ್ಥ ಬಿ.ರಾಮಲಿಂಗಾರಾಜು, ಭಾರತದಲ್ಲಿ ಅತ್ಯಧಿಕ 10 ವರ್ಷಗಳ ಕಾರಾಗ್ರಹ ಶಿಕ್ಷೆ ಮತ್ತು 25 ಕೋಟಿ ರೂಪಾಯಿ ದಂಡ ತೆರಬೇಕಾಗುತ್ತದೆ ಆದರೆ ಅಮೆರಿಕದಲ್ಲಿ ರಾಜುವಿಗೆ ಅತ್ಯಧಿಕ 24 ವರ್ಷಗಳ ಶಿಕ್ಷೆ ಹಾಗೂ ಬಿಲಿಯನ್ ಡಾಲರ್ ದಂಡ ತೆರಬೇಕಾಗುತ್ತದೆಭಾರತ ಸಂವಿಧಾನದ ಅನ್ವಯ ನಕಲಿ ದಾಖಲೆ ಸೃಷ್ಟಿ, ಆರ್ಥಿಕ ವಂಚನೆ, ನಂಬಿಕೆ ದ್ರೋಹವೆಸಗಿದ್ದರಿಂದ ಸತ್ಯ ರಾಜು ಅವರಿಗೆ ಅತ್ಯಧಿಕವಾಗಿ ಏಳು ವರ್ಷಗಳ ಶಿಕ್ಷೆಯಾಗಬಹುದು ಎಂದು ಕಾನೂನು ಸಂಸ್ಥೆಯೊಂದು ಅಭಿಪ್ರಾಯಪಟ್ಟಿದೆ. ಸತ್ಯಂ ಮುಖ್ಯಸ್ಥ ಬಿ.ರಾಮಲಿಂಗಾರಾಜು ತಮ್ಮ ರಾಜೀನಾಮೆ ಪತ್ರದಲ್ಲಿ ವಂಚನೆಯನ್ನು ಒಪ್ಪಿಕೊಂಡಿರುವುದು ಸಾಬೀತಾದಲ್ಲಿ ಇದೊಂದು ಗಂಭೀರವಾದ ಪ್ರಕರಣ. ಸೆಬಿ, ಕಂಪೆನಿ ಕಾಯ್ದೆ ಮತ್ತು ಕಾನೂನನ್ನು ಉಲ್ಲಂಘಿಸಿದಂತೆ ಎಂದು ಸರ್ವೋಚ್ಚ ನ್ಯಾಯಾಲಯದ ವಕೀಲ ಸಿ.ಎ.ಸುಂದರಂ ಹೇಳಿದ್ದಾರೆ. ಸೆಕ್ಯೂರಿಟೀಸ್ ಕಾಂಟ್ರಾಕ್ಟ್ ರೆಗುಲೇಶನ್ ಆಕ್ಟ್ 1956ರ ಪ್ರಕಾರ ರಾಜು, 10 ವರ್ಷಗಳ ಕಾರಾಗ್ರಹ ಶಿಕ್ಷೆ ಹಾಗೂ 25 ಕೋಟಿ ರೂ. ದಂಡ ಪಾವತಿಸಬೇಕಾಗುತ್ತದೆ. ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿಗಳಾದ ಯು.ಕೆ ಚೌಧರಿಯವರ ಪ್ರಕಾರ, ಕಂಪೆನಿ ಕಾಯ್ದೆ 628ರ ಪ್ರಕಾರ ಸತ್ಯಂ ರಾಜು ಅವರಿಗೆ 2 ವರ್ಷಗಳ ಶಿಕ್ಷೆಯಾಗುವ ಸಾಧ್ಯತೆಗಳಿದ್ದು, ನಕಲಿ ಅಫಿಡವಿಟ್ ಹಾಗೂ ಇತರ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಸಾಬೀತಾದಲ್ಲಿ ನ್ಯಾಯಾಲಯ 2 ವರ್ಷಗಳ ಶಿಕ್ಷೆಯನ್ನು ಏಳು ವರ್ಷಗಳಿಗೆ ವಿಸ್ತರಿಸಬಹುದಾಗಿದೆ ಎಂದು ತಿಳಿಸಿದ್ದಾರೆ. |