ತೈಲ ಸಂಸ್ಥೆಯ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಪ್ರವೇಶಿಸಿದ್ದರಿಂದ ಮುಂದಿನ ಒಂದೆರಡು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಸಿಲಿಂಡರ್ ಸರಬರಾಜಿನಲ್ಲಿ ತೊಂದರೆ ಎದುರಾಗಲಿದೆ ಎಂದು ಮೂಲಗಳು ತಿಳಿಸಿವೆ.ರಾಜಧಾನಿ ನವದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ಪಂಪ್‌ಗಳು ಪೆಟ್ರೋಲ್ ಕೊರತೆಯನ್ನು ಎದುರಿಸುತ್ತಿದ್ದು ಅದಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ವೈಮಾನಿಕ ಸಂಸ್ಥೆಗಳು ಕೂಡಾ ಆತಂಕವನ್ನು ಎದುರಿಸುತ್ತಿವೆ ಎಂದು ಹೇಳಲಾಗಿದೆ. ಇವತ್ತಿನವರೆಗೆ ತೈಲ ನಿರ್ವಹಣೆ ಪರಿಸ್ಥಿತಿಯನ್ನು ನಿಭಾಯಿಸಲಾಯಿತು. ಆದರೆ ತೈಲ ಸಂಸ್ಥೆ ಅಧಿಕಾರಿಗಳ ಮುಷ್ಕರ ಮುಂದುವರಿದಲ್ಲಿ ತೈಲ ಸರಬರಾಜಿಗೆ ಅಡ್ಡಿಯಾಗಲಿದೆ ಎಂದು ಐಒಸಿ ಮುಖ್ಯಸ್ಥ ಸಾರ್ಥಕ್ ಬೆಹುರಿಯಾ ಹೇಳಿದ್ದಾರೆ.ದಕ್ಷಿಣ ಭಾರತದಲ್ಲಿ ಸರಕು ಸಾಗಾಣೆ ಲಾರಿಗಳ ಮಾಲೀಕರು ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ತೊಡಗಿದ್ದರಿಂದ ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತಯ ಉಂಟಾಗಲಿದೆ ಎಂದು ಐಒಸಿ ಅಧಿಕಾರಿಗಳು ತಿಳಿಸಿದ್ದಾರೆ. |