ಸತ್ಯಂನ ರಾಮಲಿಂಗಾರಾಜು ಕುಟುಂಬ ಸಂಚಾಲಿತ ಮೆಟಾಸ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿಯ ಮುಖ್ಯಸ್ಥ ಆರ್.ಸಿ.ಸಿನ್ಹಾ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೆಟಾಸ್ ಇನ್‌ಫ್ರಾ ಲಿಮಿಟೆಡ್‌ನ ಮುಖ್ಯಸ್ಥ ಆರ್.ಸಿ.ಸಿನ್ಹಾ ತಮ್ಮ ವ್ಯಯಕ್ತಿಕ ಕಾರಣಗಳಿಂದಾಗಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮೆಟಾಸ್ ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ಮೆಟಾಸ್ ಇನ್‌ಫ್ರಾ ಅಡಳಿತ ಮಂಡಳಿಯಲ್ಲಿ ಆರ್.ಪಿ.ರಾಜು (ಸ್ವತಂತ್ರ ನಿರ್ದೇಶಕ)ಬಿ.ತೇಜಾ ರಾಜು(ಉಪಾಧ್ಯಕ್ಷ) ಪಿ.ಕೆ ಮಾಧವ್ (ಸಿಇಒ) ಮತ್ತು ಚಂದರ್ ಶೀಲ್ ಬನ್ಸಾಲ್ ( ನಿರ್ದೇಶಕ) ಅವರನ್ನೊಳಗೊಂಡಿದೆ.
ಸೆಪ್ಟೆಂಬರ್ 2008 ಕ್ಕೆ ಅಂತ್ಯಗೊಂಡಂತೆ ಮೆಟಾಸ್ ಶೇರುಹೋಲ್ಡಿಂಗ್‌ನಲ್ಲಿ ಸತ್ಯಂ ಮುಖ್ಯಸ್ಥ ಬಿ.ರಾಮಲಿಂಗಾರಾಜು ಪುತ್ರ ತೇಜಾ ರಾಜು ಶೇ.2.53 ರಷ್ಟು ಶೇರುಗಳನ್ನು ಹೊಂದಿದ್ದು, ರಾಜು ಕುಟುಂಬದವರ ಒಟ್ಟು ಶೇರುಗಳು ಶೇ.36 ರಷ್ಟಾಗಿವೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.
ರಾಮಲಿಂಗಾರಾಜು ನಿನ್ನೆ ಸತ್ಯಂ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದು, ಆರ್ಥಿಕ ವಂಚನೆ ಎಸಗಿರುವುದಾಗಿ ಹೇಳಿದ್ದಾರೆ. |