ಅಮೆರಿಕ ಮೂಲದ ಐಝಾರ್ಡ್ ನೊಬೆಲ್ ಎಲ್‌ಎಲ್‌ಪಿ ಮತ್ತು ವೈನಾಲೆ ಆಂಡ್ ವೈನಾಲೆ ಎಲ್‌ಎಲ್‌ಪಿ ಕಾನೂನು ಸಂಸ್ಥೆಗಳು ಅಮೆರಿಕದಲ್ಲಿರುವ ಸತ್ಯಂ ಶೇರುದಾರರ ಪರವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿವೆ ಎಂದು ಮೂಲಗಳು ತಿಳಿಸಿವೆ.
ಜನೆವರಿ 6 2004 ರಿಂದ ಜನೆವರಿ2009 ರೊಳಗೆ ಸತ್ಯಂ ಶೇರುಗಳನ್ನು ಖರೀದಿಸಿದವರ ಪರವಾಗಿ ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಿದ್ದು ಸಂಸ್ಥೆಯ ವಿರುದ್ಧ ಸೂಕ್ತ ತೆಗೆದುಕೊಳ್ಳುವಂತೆ ಮನವಿ ಮಾಡಿದೆ.
ಮತ್ತೊಂದು ಕಾನೂನು ಸಂಸ್ಥೆಯಾದ ವೈನಾಲೆ ಆಂಡ್ ವೈನಾಲೆ ಎಲ್‌ಎಲ್‌ಪಿ ಕೂಡಾ ಜನೆವರಿ 6 2004 ರಿಂದ ಜನೆವರಿ2009 ರೊಳಗೆ ಸತ್ಯಂ ಶೇರುಗಳನ್ನು ಖರೀದಿಸಿದವರ ಪರವಾಗಿ ಪ್ರಕರಣವನ್ನು ದಾಖಲಿಸಲಿದ್ದು ಸಂಸ್ಥೆಯ ವಿರುದ್ಧ ಸೂಕ್ತ ತೆಗೆದುಕೊಳ್ಳುವಂತೆ ಮನವಿ ಮಾಡಿದೆ.
ಸತ್ಯಂ ಮುಖ್ಸಸ್ಥ ರಾಮಲಿಂಗಾರಾಜು ಹುದ್ದೆಗೆ ರಾಜೀನಾಮೆ ನೀಡಿ 7800 ಕೋಟಿ ರೂಪಾಯಿಗಳ ವಂಚಿಸಿರುವುದಾಗಿ ಹೇಳಿಕೆ ನೀಡಿದ ನಂತರ ಶೇ.90 ರಷ್ಟು ಶೇರು ವಹಿವಾಟಿನಲ್ಲಿ ಇಳಿಕೆ ಕಂಡಿದ್ದರಿಂದ ನಿನ್ನೆಯ ವಹಿವಾಟು ಸ್ಥಗಿತಗೊಳಿಸಲಾಯಿತು.
ನ್ಯೂಯಾರ್ಕ್ ಶೇರುಪೇಟೆ ನಿಯಂತ್ರಕ ಸಂಸ್ಥೆ ಸತ್ಯಂ ಬೆಳವಣಿಗೆಗಳನ್ನು ಗಮನಿಸುತ್ತಿದ್ದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ. ಬುಧವಾರದಂದು ಕಾರ್ಪೋರೇಟ್ ಸಚಿವಾಲಯ ಹಾಗೂ ಸೆಬಿ ಸತ್ಯಂ ಪ್ರಕರಣದ ತನಿಖೆಯನ್ನು ನಡೆಸಿ ತಪ್ಪಿತಸ್ಥರನ್ನು ಕಾನೂನಿನಡಿಯಲ್ಲಿ ಶಿಕ್ಷಿಸಲಾಗುವುದು ಎಂದು ಪ್ರಕಟಿಸಿವೆ. |