ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸೆಬಿ ತಂಡ ರಾಜು ಮನೆಗೆ, ರಾಜು ಮನೆಗೆ ಬೀಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೆಬಿ ತಂಡ ರಾಜು ಮನೆಗೆ, ರಾಜು ಮನೆಗೆ ಬೀಗ
ಹೈದರಾಬಾದ್: ಸತ್ಯಂ ಕಂಪ್ಯೂಟರ್ಸ್ ಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಶೇರು ಮಿನಿಮಯ ಕೇಂದ್ರ(ಸೆಬಿ)ದ ತಂಡ ಒಂದು ಸಂಸ್ಥಾಪಕ ರಾಮಲಿಂಗಾ ರಾಜು ಮನೆಗೆ ತೆರಳಿದೆ. ಆದರೆ ಮನೆಗೆ ಬೀಗ ಜಡಿದಿರುವ ಕಾರಣ ತಂಡವು ಬರಿಗೈಲಿ ಮರಳಬೇಕಾಯಿತು.

ತಂಡವು ಸತ್ಯಂ ಮುಖ್ಯಕಚೇರಿಗೆ ತೆರಳಲಿದೆ ಎಂದು ಹೇಳಲಾಗಿದೆ. ಅಲ್ಲದೆ ಸೆಬಿಯ ಮುಂಬೈ ಕಚೇರಿಯಲ್ಲಿ ಹಾಜರಾಗುವಂತೆ ರಾಜುಗೆ ನೋಟೀಸು ನೀಡಿದೆ.
ಮಾರುಕಟ್ಟೆ ನಿಯಂತ್ರಕರ ಆದೇಶದನ್ವಯ ಸೆಬಿಯ ತಂಡವು ತನಿಖೆಗಾಗಿ ಗುರುವಾರವೇ ಸತ್ಯಂ ಕಚೇರಿಗೆ ತೆರಳಿತ್ತು.

ಬುಧವಾರದಂದು ಸತ್ಯಂ ಸಂಸ್ಥಾಪಕ ರಾಮಲಿಂಗಾ ರಾಜು ಅವರು ಸಂಸ್ಥೆಯಲ್ಲಿ 7,800 ಕೋಟಿ ರೂಪಾಯಿ ಅವ್ಯವಹಾರವಾಗಿರುವುದಾಗಿ ಹೇಳಿ ಸಂಸ್ಥೆಗೆ ರಾಜು ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ತನಿಖೆಗೆ ಆದೇಶ ನೀಡಲಾಗಿದೆ.

ರಾಜು ಇದೀಗ ಎಲ್ಲಿ ಅಡಗಿದ್ದಾರೆ ಎಂಬ ಕುರಿತು ಊಹಾಪೋಹಗಳು ಹುಟ್ಟಿಕೊಂಡಿದೆ. ಅವರ ವಕೀಲರು ಹೇಳುವ ಪ್ರಕಾರ ಸತ್ಯಂನ ಮಾಜಿ ಅಧ್ಯಕ್ಷ ಹೈದರಾಬಾದಿನಲ್ಲೇ ಇದ್ದಾರೆ. ಅವರು ನಗರದ ಹೊರವಲಯದಲ್ಲಿರುವ ಅತಿಥಿ ಗೃಹದಲ್ಲಿರಬಹುದು ಎಂಬುದಾಗಿಯೂ ಊಹಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೈಲ ಪೂರೈಕೆ ಸುಗಮಕ್ಕೆ ಸೇನೆಗೆ ಬುಲಾವ್
ತೈಲ ಮುಷ್ಕರ ಅಂತ್ಯದ ಆರಂಭ: ಕೆಲಸಕ್ಕೆ ವಾಪಸಾದ ಬಿಪಿಸಿಎಲ್
ನಿಸಾನ್‌ನಿಂದ 1200 ನೌಕರರಿಗೆ ಖೊಕ್
10 ತಿಂಗಳಷ್ಟು ಹಿಂದಕ್ಕೆ: ಹಣದುಬ್ಬರ ದರ ಶೇ.5.91
ಕಚ್ಚಾ ತೈಲ ಬೆಲೆ ಅಲ್ಪ ಏರಿಕೆ
ಟಿಡಿಕೆಯಿಂದ 8000 ನೌಕರರಿಗೆ ಗೇಟ್‌ಪಾಸ್