ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಸತ್ಯಂ ಎಫೆಕ್ಟ್: ಸೆನ್ಸೆಕ್ಸ್ ಕುಸಿತ ಮುಂದುವರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಸತ್ಯಂ ಎಫೆಕ್ಟ್: ಸೆನ್ಸೆಕ್ಸ್ ಕುಸಿತ ಮುಂದುವರಿಕೆ
ಗುರುವಾರಕ್ಕಿಂತ 153 ಅಂಕಗಳಷ್ಟು ಕೆಳಗೆ 9434ರಲ್ಲಿ ಆರಂಭ ಪಡೆಡ ಸೆನ್ಸೆಕ್ಸ್ ಸೂಚ್ಯಂಕವು ಕೆಲವೇ ಕ್ಷಣಗಳಲ್ಲಿ 9352ರವರೆಗೂ ಕುಸಿತ ಕಂಡಿತಾದರೂ, ಆ ಬಳಿಕ ಮರಳಿ ನೆಗೆದು, ದಿನದ ಅಂತ್ಯಕ್ಕಿಂತ 278 ಅಂಕ ಏರಿಕೆ ಕಂಡು, 9630ಕ್ಕೆ ತಲುಪಿತು. ಆದರೆ ಮರಳಿ ಕುಸಿದ ಅದು, ದಿನದಂತ್ಯಕ್ಕೆ ಒಟ್ಟು 180ರಷ್ಟು ಅಂಕ ಪತನಗೊಂಡು 9406ರಲ್ಲಿ ಸ್ಥಿರವಾಯಿತು.

ಇದೇ ರೀತಿ, ಸತ್ಯಂ ಕಂಪ್ಯೂಟರ್ಸ್ ಹಗರಣವು ವಿದೇಶೀ ನಿಧಿಗಳ ಹೊರ ಹರಿವಿಗೆ ಕಾರಣವಾಗುತ್ತದೆ ಎಂಬ ಆತಂಕದಿಂದಾಗಿ ಎನ್ಎಸ್ಇ ಸೂಚ್ಯಂಕ ನಿಫ್ಟಿ ಕೂಡ ಶೇ.1.65 ಅಂದರೆ 47.40 ಅಂಕಗಳಷ್ಟು ಕುಸಿದು 2873 ಅಂಕಕ್ಕೆ ಇಳಿಯಿತು.

ಗುರುವಾರ 749 ಅಂಕ ಕುಸಿದಿದ್ದ ಸೆನ್ಸೆಕ್ಸ್, ಸತ್ಯಂ ಕಂಪ್ಯೂಟರ್ಸ್, ಲಾರ್ಸನ್ ಆಂಡ್ ಟೂಬ್ರೋ, ರಿಲಯನ್ಸ್ ಕಮ್ಯುನಿಕೇಶನ್ಸ್ ಮತ್ತು ಬಿಎಚ್ಇಎಲ್ ಶೇರುಗಳ ತೀವ್ರ ಹಿನ್ನಡೆಯಿಂದಾಗಿ ಶುಕ್ರವಾರ 180 ಅಂಕ ಕೆಳಗಿಳಿಯಿತು.

ಸತ್ಯಂ ಕಂಪ್ಯೂಟರ್ಸ್ ಶೇರುಗಳಂತೂ ಕಳೆದೆರಡು ದಿನಗಳಿಂದ ಒಟ್ಟಾರೆಯಾಗಿ ಶೇ.82ರಷ್ಟು ಪತನವಾಯಿತು. ಸತ್ಯಂನಲ್ಲಿ ಶೇ.3.95ರಷ್ಟು ಶೇರುಗಳನ್ನು ಹೊಂದಿದ್ದ ಲಾರ್ಸನ್ ಆಂಡ್ ಟೂಬ್ರೋ ಶೇರುಗಳು ಕೂಡ ಶೇ.7.15ರಷ್ಟು ಕುಸಿತ ಕಂಡಿತು.

ದೇಶದ ನಾಲ್ಕನೇ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿಯ ಹಗರಣದಿಂದಾಗಿ ವಿದೇಶೀ ಹೂಡಿಕೆದಾರರು ಭಾರತೀಯ ಮಾರುಕಟ್ಟೆ ಮೇಲೆ ನಂಬಿಕೆ ಕಳೆದುಕೊಂಡು ಹೂಡಿಕೆ ವಾಪಸ್ ಪಡೆಯುವರೆಂಬ ಆತಂಕದಲ್ಲಿಯೇ ಶುಕ್ರವಾರ ವಹಿವಾಟು ಆರಂಭವಾಗಿತ್ತು.

30 ಸೆನ್ಸೆಕ್ಸ್ ಸ್ಟಾಕುಗಳಲ್ಲಿ 19 ಸ್ಟಾಕುಗಳು ಲಾಭ ಗಳಿಸಿದವಾದರೂ, 11 ಸ್ಟಾಕುಗಳ ಶೇರುಗಳಂತೂ ರಸಾತಳಕ್ಕಿಳಿದವು.

ಸತ್ಯಂ (ಶೇ. 40.30), ಸ್ಟರ್ಲೈಟ್ ಇಂಡ್ (ಶೇ.9.55), ರಿಲಯನ್ಸ್ ಕಾಂ (ಶೇ.9.61), ರಿಲಯನ್ಸ್ ಇನ್ಫ್ರಾ (ಶೇ.7.7), ಟಾಟಾ ಸ್ಟೀಲ್ (ಶೇ.8.20), ಡಿಎಲ್ಎಫ್ ಲಿ. (ಶೇ.7.25) ಮತ್ತು ಲಾರ್ಸನ್ ಆಂಡ್ ಟೂಬ್ರೋ (ಶೇ.7.15) ನಷ್ಟಕ್ಕೀಡಾದವು.

ಒಟ್ಟಾರೆಯಾಗಿ ಲೋಹ ಕ್ಷೇತ್ರದ ಸ್ಟಾಕುಗಳು ಶೇ.7.16, ಸ್ಥಿರಾಸ್ಥಿ ಸೂಚ್ಯಂಕ ಶೇ.5.15, ಬಂಡವಾಳ ಸರಕು ಸೂಚ್ಯಂಕ ಶೇ.4.70, ತೈಲ ಮತ್ತು ಅನಿಲ ಸೂಚ್ಯಂಕ ಶೇ. 2.81, ಗ್ರಾಹಕವಸ್ತುಗಳ ಸೂಚ್ಯಂಕ ಶೇ.2.40 ಮತ್ತು ವಿದ್ಯುತ್ ವಿಭಾಗದ ಸೂಚ್ಯಂಕವು ಶೇ.1.99ರಷ್ಟು ಕುಸಿತ ದಾಖಲಿಸಿದವು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೆಬಿ ತಂಡ ರಾಜು ಮನೆಗೆ, ರಾಜು ಮನೆಗೆ ಬೀಗ
ತೈಲ ಪೂರೈಕೆ ಸುಗಮಕ್ಕೆ ಸೇನೆಗೆ ಬುಲಾವ್
ತೈಲ ಮುಷ್ಕರ ಅಂತ್ಯದ ಆರಂಭ: ಕೆಲಸಕ್ಕೆ ವಾಪಸಾದ ಬಿಪಿಸಿಎಲ್
ನಿಸಾನ್‌ನಿಂದ 1200 ನೌಕರರಿಗೆ ಖೊಕ್
10 ತಿಂಗಳಷ್ಟು ಹಿಂದಕ್ಕೆ: ಹಣದುಬ್ಬರ ದರ ಶೇ.5.91
ಕಚ್ಚಾ ತೈಲ ಬೆಲೆ ಅಲ್ಪ ಏರಿಕೆ