ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅ-ಸತ್ಯಂ ಬ್ಯಾಂಕ್ ದಾಖಲೆಗಳು ನಾಪತ್ತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅ-ಸತ್ಯಂ ಬ್ಯಾಂಕ್ ದಾಖಲೆಗಳು ನಾಪತ್ತೆ
ಸತ್ಯಂ ಕಪಾಟಿನೊಳಗಿಂದ ಅಸ್ಥಿಪಂಜರಗಳೆಲ್ಲಾ ಹೊರಬರುತ್ತಿರುವುದು ಇನ್ನೂ ನಿಂತಿಲ್ಲ. ದೇಶದ ಮಾರುಕಟ್ಟೆಯನ್ನೇ ನಡುಗಿಸಿದ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಸುಳಿವು ನೀಡಬಲ್ಲ ಬ್ಯಾಂಕು ಸ್ಟೇಟ್‌ಮೆಂಟ್‌ಗಳನ್ನು ಹಗರಣದ ರೂವಾರಿ ರಾಮಲಿಂಗ ರಾಜು ಮತ್ತು ಆತನ ಸಹಾಯಕರು ಬಚ್ಚಿಟ್ಟಿದ್ದಾರೆ ಎಂಬ ಅಂಶವೂ ಹೊರಬರತೊಡಗಿದೆ.

ಹೈದರಾಬಾದಿನಲ್ಲಿರುವ ಸತ್ಯಂನ ಮೂರು ಕಚೇರಿಗಳಿಗೆ ರಿಜಿಸ್ಟ್ರಾರ್ ಆಫ್ ಕಂಪನೀಸ್ ದಾಳಿ ನಡೆಸಿದಾಗಲೂ ಎಲ್ಲಿ ಕೂಡ ಈ ಕುರಿತ ದಾಖಲೆಗಳು ಪತ್ತೆಯಾಗಿಲ್ಲ. ಆ ಬಳಿಕ ಈ ಕಚೇರಿಗಳಿಗೆ ಬೀಗ ಜಡಿಯಲಾಗಿದೆ.

ನೋಂದಾಯಿತ ಕಚೇರಿಗಳಲ್ಲಿ ಯಾವುದೇ ಕಂಪನಿಗಳು ಪ್ರಸಕ್ತ ವರ್ಷದ ಮತ್ತು ಹಿಂದಿನ ವರ್ಷಗಳ ಹಣಕಾಸು ಸ್ಟೇಟ್‌ಮೆಂಟ್ ನೀಡಬೇಕಾಗುತ್ತದೆ. ಇದೀಗ ಸತ್ಯಂನ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ದಿಢೀರ್ ನಾಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಈ ಬಗ್ಗೆ ತನಿಖೆ ನಡೆಸುವಂತೆ ಕಂಪನಿಗಳ ಪ್ರಾದೇಶಿಕ ಕಚೇರಿಯು ಗಂಭೀರ ಹಗರಣ ತನಿಖಾ ಸಂಸ್ಥೆ (ಎಸ್ಎಫ್ಐಒ)ಗೆ ನಿರ್ದೇಶನ ನೀಡುವ ಸಾಧ್ಯತೆಗಳಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಟಿ: ತಮಿಳ್ನಾಡಲ್ಲಿ ಐಟಿಗೆ ಭವಿಷ್ಯ ಇಲ್ಲವಂತೆ!
ಟ್ರಕ್ ಮುಷ್ಕರ 6ನೇ ದಿನಕ್ಕೆ: ಜನತೆ ಪರದಾಟ
ಸತ್ಯಂ ನಿರ್ದೇಶಕರ ಮಂಡಳಿ ವಜಾ ಮಾಡಿದ ಕೇಂದ್ರ
ಅಸತ್ಯಂ ಎಫೆಕ್ಟ್: ಸೆನ್ಸೆಕ್ಸ್ ಕುಸಿತ ಮುಂದುವರಿಕೆ
ಸೆಬಿ ತಂಡ ರಾಜು ಮನೆಗೆ, ರಾಜು ಮನೆಗೆ ಬೀಗ
ತೈಲ ಪೂರೈಕೆ ಸುಗಮಕ್ಕೆ ಸೇನೆಗೆ ಬುಲಾವ್