ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸುದ್ದಿ ಚಾನೆಲ್‌ಗಳ ಲೋಕದಲ್ಲಿ ಹೊಸ ಅಧ್ಯಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸುದ್ದಿ ಚಾನೆಲ್‌ಗಳ ಲೋಕದಲ್ಲಿ ಹೊಸ ಅಧ್ಯಾಯ
PR
ಐಎನ್ಎಕ್ಸ್ ನ್ಯೂಸ್ ಟಿವಿ ಚಾನೆಲನ್ನು ಇಂಡಿ ಮೀಡಿಯಾ ಕಂಪನಿ ಪ್ರೈವೇಟ್ ಲಿಮಿಟೆಡ್ ಶುಕ್ರವಾರ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವುದರೊಂದಿಗೆ ಸುದ್ದಿ ಚಾನೆಲ್‌ಗಳ ಜಗತ್ತಿನಲ್ಲಿ ಹೊಸದೊಂದು ಅಧ್ಯಾಯವು ತೆರೆದುಕೊಂಡಿತು.

ಇಂಡಿ ಮೀಡಿಯಾ ಕಂಪನಿಯು 'ವೆಬ್‌ದುನಿಯಾ' ಸಂಸ್ಥಾಪಕ ಮತ್ತು 'ನಯೀ ದುನಿಯಾ' ಸಿಇಒ ವಿನಯ್ ಛಜಲಾನಿ ಹಾಗೂ ಬಿಜಿನೆಸ್ ವರ್ಲ್ಡ್ ಇಂಡಿಯಾದ ಮಾಜಿ ಸಂಪಾದಕ ಎಂ.ಆರ್.ಜಹಾಂಗೀರ್ ಪೋಚಾ ಅವರ ಜಂಟಿ ಸಹಯೋಗದ ವಿನೂತನ ಸಂಸ್ಥೆ ಎಂಬುದು ಇಲ್ಲಿ ಗಮನಾರ್ಹ.

ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ಒಡೆತನದಲ್ಲಿದ್ದ ಐಎನ್ಎಕ್ಸ್ ನ್ಯೂಸ್‌ನಲ್ಲಿ ಶೇ.100 ಶೇರುಗಳನ್ನು ಹೊಸದಾಗಿ ಸ್ಥಾಪನೆಯಾಗಿರುವ ಇಂಡಿ ಮೀಡಿಯಾ ಖರೀದಿಸಿದೆ. ಇದು ಮಾಧ್ಯಮ ಲೋಕದಲ್ಲಿ ಸ್ವಾಗತಾರ್ಹ ಬೆಳವಣಿಗೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಅಸಂಖ್ಯಾತ ಸುದ್ದಿ ಚಾನೆಲ್‌ಗಳ ಲೋಕದಲ್ಲಿ ನ್ಯೂಸ್ ಎಕ್ಸ್‌ನ ಹೊಸ ಅವತಾರವು ತನ್ನದೇ ಆದ ಛಾಪು ಮೂಡಿಸಲಿದೆ ಎಂದು ನಂಬಲಾಗಿದೆ. ಅದು ಹೊಸ ಹೊಣೆಗಾರಿಕೆ, ವೃತ್ತಿಪರತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ಜನಮನಗೆಲ್ಲಲಿದೆ.

ಈ ಬದಲಾವಣೆಯನ್ನು ಸ್ವಾಗತಿಸಿರುವ ನ್ಯೂಸ್ಎಕ್ಸ್‌ನ ನಿರ್ಗಮನ ಸಿಇಒ ಪೀಟರ್ ಮುಖರ್ಜಿ, ಇಂಥ ಹೆಜ್ಜೆಗಳು ಮಾರುಕಟ್ಟೆಯಲ್ಲಿ ನ್ಯೂಸ್ಎಕ್ಸ್ ಚಾನೆಲ್‌ನ ಭರ್ಜರಿ ವಿಸ್ತರಣೆಗೆ ಪೂರಕವಾಗಲಿದೆ ಎಂದಿದ್ದಾರೆ. ಪ್ರತಿಷ್ಠಿತ ಪತ್ರಿಕಾ ಬಳಗ (ನಯೀದುನಿಯಾ)ದೊಂದಿಗೆ ಜತೆಗೂಡಿರುವುದರಿಂದ ಈ ಚಾನೆಲ್ ಜನಪ್ರಿಯತೆಯ ಉತ್ತುಂಗಕ್ಕೇರಿ ಮತ್ತಷ್ಟು ಶಕ್ತಿಶಾಲಿಯಾಗಿ ಮೂಡಿಬರಲಿದೆ.

ಮಾಲೀಕತ್ವದ ಬದಲಾವಣೆಯು ಚಾನೆಲ್‌ನಲ್ಲಿ ಹೊಸ ಅವಕಾಶಗಳಿಗೂ ಎಡೆಮಾಡಿಕೊಟ್ಟಿದೆ ಎಂದು ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅ-ಸತ್ಯಂ ಬ್ಯಾಂಕ್ ದಾಖಲೆಗಳು ನಾಪತ್ತೆ
ಐಟಿ: ತಮಿಳ್ನಾಡಲ್ಲಿ ಐಟಿಗೆ ಭವಿಷ್ಯ ಇಲ್ಲವಂತೆ!
ಟ್ರಕ್ ಮುಷ್ಕರ 6ನೇ ದಿನಕ್ಕೆ: ಜನತೆ ಪರದಾಟ
ಸತ್ಯಂ ನಿರ್ದೇಶಕರ ಮಂಡಳಿ ವಜಾ ಮಾಡಿದ ಕೇಂದ್ರ
ಅಸತ್ಯಂ ಎಫೆಕ್ಟ್: ಸೆನ್ಸೆಕ್ಸ್ ಕುಸಿತ ಮುಂದುವರಿಕೆ
ಸೆಬಿ ತಂಡ ರಾಜು ಮನೆಗೆ, ರಾಜು ಮನೆಗೆ ಬೀಗ