ಕಾಠ್ಮಂಡು: ನೇಪಾಳದ ಜಲವಿದ್ಯುದಾಗಾರಗಳಲ್ಲಿ ತೀವ್ರ ನೀರಿನ ಅಭಾವದ ಹಿನ್ನೆಲೆಯಲ್ಲಿ ವಿದ್ಯುತ್ ಕೊರತೆ ಸರಿದೂಗಿಸುವ ನಿಟ್ಟಿನಲ್ಲಿ, ಭಾನುವಾರದಿಂದ ಜಾರಿಗೆ ಬರುವಂತೆ ನೇಪಾಳದಲ್ಲಿ ಪ್ರತಿ ದಿನ 16 ಗಂಟೆ ಲೋಡ್ ಶೆಡ್ಡಿಂಗ್ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತೆಯೇ, ಭಾರತದಿಂದ ವಿದ್ಯುತ್ ಖರೀದಿಸುವ ಬಗ್ಗೆ ನೇಪಾಳ ಸರಕಾರ ಯೋಚಿಸುತ್ತಿದೆ. |