ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿಶ್ವಬ್ಯಾಂಕು ಗುತ್ತಿಗೆಗೆ ವಿಪ್ರೋ ಅನರ್ಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಬ್ಯಾಂಕು ಗುತ್ತಿಗೆಗೆ ವಿಪ್ರೋ ಅನರ್ಹ
ಭಾರತೀಯ ಸಾಫ್ಟವೇರ್ ಮಾರಾಟಗಾರರಾಗಿರುವ ವಿಪ್ರೋ ಮತ್ತು ಮೆಗಾಸಾಫ್ಟ್‌ಗಳೊಂದಿನ ನೇರ ವ್ಯವಹಾರವನ್ನು ವಿಶ್ವಬ್ಯಾಂಕ್ ಸೋಮವಾರ ನಿಷೇಧಿಸಿದೆ. ಇದರಿಂದಾಗಿ ತನ್ನ ಕಾರ್ಪೋರೇಟ್ ಸಂಗ್ರಹ ಕಾರ್ಯಕ್ರಮದಂಗವಾಗಿ ಮಾರಾಟ ನಡೆಸುತ್ತಿರುವ ಮೂರು ಸಂಸ್ಥೆಗಳ ಮೇಲೆ ವಿಶ್ವಬ್ಯಾಂಕು ನಿಷೇಧ ಹೇರಿದಂತಾಗಿದೆ. ಪ್ರಥಮವಾಗಿ ವಿಶ್ವಬ್ಯಾಂಕು ನಿಷೇಧ ಹೇರಿದ ಬಳಿಕ ರಾಮಲಿಂಗಾ ರಾಜು ಸತ್ಯಂ ಕಂಪ್ಯೂಟರ್ಸ್‌ನ ಅವ್ಯವಹಾರವನ್ನು ಬಹಿರಂಗಪಡಿಸಿ ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಡಿಸೆಂಬರ್ 25ರಂದು ಬ್ಯಾಂಕ್ ನಿಷೇಧದ ಘೋಷಣೆ ಮಾಡಿತ್ತು. ಈ ಬದಲಾವಣೆಯನ್ನು ಪಾರದರ್ಶಕತೆ ಮತ್ತು ಯುಕ್ತತೆಯ ಹಿತಾಸಕ್ತಿಯಿಂದ ಮಾಡಲಾಗಿದೆ ಎಂದು ಬ್ಯಾಂಕು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಾಷ್ಟ್ರದ ತೃತೀಯ ಬೃಹತ್ ಸಾಫ್ಟ್‌ವೇರ್ ರಫ್ತು ಸಂಸ್ಥೆಯು ವಿಶ್ವ ಬ್ಯಾಂಕಿನೊಂದಿಗೆ ನೇರ ಒಪ್ಪಂದಕ್ಕಾಗಿ ಸ್ಫರ್ಧಿಸಲು 2011ರ ತನಕ ಆರ್ಹವಲ್ಲ ಎಂದು ಬ್ಯಾಂಕು ಸೋಮವಾರ ಹೇಳಿದೆ.

ವಿಪ್ರೋವು ವಿಶ್ವ ಬ್ಯಾಂಕಿನಿಂದ ಪಡೆಯುತ್ತಿರುವ ಆದಾಯವು ಅಲ್ಪವಾಗಿದೆ ಎಂದು ಎಂದು ಹೇಳಿರುವ ವಿಪ್ರೋ ವಕ್ತಾರರು ಇದರಿಂದ ಸಂಸ್ಥೆಗೆ ಯಾವುದೇ ಹಾನಿಯಾಗದು ಎಂದು ತಿಳಿಸಿದ್ದಾರೆ. ವಿಶ್ವಬ್ಯಾಂಕಿನಿಂದ ಭವಿಷ್ಯದ ಗುತ್ತಿಗೆಗಳನ್ನು ಪಡೆಯುವ ನಮ್ಮ ಅಸಾಮರ್ಥ್ಯವು ನಮ್ಮ ವ್ಯವಹಾರ ಇಲ್ಲವೇ ಕಾರ್ಯಾಚರಣೆಗಳ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪರಿಷ್ಕೃತ ನೀತಿಗಳ ಘೋಷಣೆಯಂಗವಾಗಿ ಸಂಸ್ಥೆಯು ತನ್ನ ಮಾರಾಟ ಸ್ಥಿತಿಗತಿಗತಿಗಳನ್ನು ವಿಶ್ವಬ್ಯಾಂಕಿಗೆ ಸೋಮವಾರ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಾರಿ ಮುಷ್ಕರ ಎಂಟನೆ ದಿನಕ್ಕೆ, ಕೇಂದ್ರದ ಸಭೆ
ಸತ್ಯಂ: ಕೇಂದ್ರದಿಂದ 3 ಸ್ವತಂತ್ರ ನಿರ್ದೇಶಕರ ನೇಮಕ
ಸತ್ಯಂ ಹಗರಣ: ಸಿಎಫ್‌ಓ ಶ್ರೀನಿವಾಸ್ ಬಂಧನ
ಲಾರಿ ಮುಷ್ಕರ 7ನೇ ದಿನಕ್ಕೆ; ಜನಜೀವನ ದುಸ್ತರ
ಬಿಡುಗಡೆ ಮಾಡಿದ್ರೆ ಮಾತ್ರ ಮಾತು-ಕತೆ: ಟ್ರಕ್ ಮಾಲೀಕರು
ಚಿನ್ನದ ಬೆಲೆ ಕುಸಿತ