ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಯುಎಸ್ ಶೇರು ಮಾರುಕಟ್ಟೆಯಲ್ಲಿ ನೆಲಕಚ್ಚಿದ ಭಾರತೀಯ ಶೇರುಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಎಸ್ ಶೇರು ಮಾರುಕಟ್ಟೆಯಲ್ಲಿ ನೆಲಕಚ್ಚಿದ ಭಾರತೀಯ ಶೇರುಗಳು
ಅಮೆರಿಕದ ಶೇರು ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿದ್ದ ಭಾರತೀಯ ಶೇರುಗಳು ವಾರ ಒಂದರ ಅವಧಿಯಲ್ಲಿ ಎರಡು ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ. ಎನ್‌ವೈಎಸ್ಇಯಲ್ಲಿ ಸ್ಥಾನ ಪಡೆದಿದ್ದ ಸತ್ಯಂ ಕಂಪ್ಯೂಟರ್ಸ್‌ನ ಅಸತ್ಯ ಹೊರಬಿದ್ದ ಬಳಿಕ ಭಾರತೀಯ ಶೇರುಗಳು ಭಾರೀ ಮಟ್ಟದ ಹೊಡೆತ ಕಂಡಿವೆ.

ಸತ್ಯಂ ಶೇರುಗಳ ವ್ಯವಹಾರವನ್ನು ಬುಧವಾರವೇ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಎನ್‌ವೈಎಸ್ಇಯಲ್ಲಿ ಪಟ್ಟಿಯಾಗಿದ್ದ ಇತರ 15 ಭಾರತೀಯ ಕಂಪೆನಿಗಳ ಶೇರುಗಳು ನೆಲಕಚ್ಚಿದ್ದು, ಜನವರಿ 9ಕ್ಕೆ ಅಂತ್ಯಗೊಂಡ ವಾರದಲ್ಲಿ 1.94 ಶತಕೋಟಿ ಡಾಲರ್ ನಷ್ಟ ದಾಖಲಾಗಿದೆ.

ಏತನ್ಮಧ್ಯೆ, ಸತ್ಯಂ ಸಂಸ್ಥೆಯನ್ನು ಇತರ ಯಾವುದಾದರೂ ಎದುರಾಳಿ ಸಂಸ್ಥೆ ಖರೀದಿ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಪ್ರಥಮ ಎರಡು ದಿನಗಳ ಕಾಲ ಸತ್ಯಂ ಶೇರುಗಳಿಗೆ ಬೇಡಿಕೆ ಹೆಚ್ಚಾಗಿದ್ದು, 2.26 ಶತಕೋಟಿ ಲಾಭ ಗಳಿಸಿತ್ತು.

ಜನವರಿ ಏಳರಿಂದ ಎನ್‌ವೈಎಸ್ಇ ಸತ್ಯಂ ಕಂಪ್ಯೂಟರ್ಸ್ ವ್ಯವಹಾರ ಸ್ಥಗಿತಗೊಳಿಸಿತ್ತು. ಸತ್ಯಂ ಸಂಸ್ಥಾಪಕ ರಾಮಲಿಂಗಾ ರಾಜು ಅವರು ಸಂಸ್ಥೆಯಲ್ಲಿನ ಹಣಕಾಸು ಅವ್ಯವಹಾರವನ್ನು ಬಹಿರಂಗ ಪಡಿಸಿದ ಬಳಿಕ ಈ ಸಂಸ್ಥೆಯನ್ನು ಪಟ್ಟಿಯಿಂದ ಹೊರಗಿಡಲಾಗಿತ್ತು.

ಇದರಿಂದಾಗಿ ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕುಗಳ ಶೇರುಗಳ ಮೇಲೂ ತೀವ್ರ ಪರಿಣಾಮ ಬೀರಿದೆ. ಇವೆರಡರ ಶೇರುಗಳು ಅನುಕ್ರಮವಾಗಿ 1.20ಶತ ಕೋಟಿ ಮತ್ತು 1.04 ಶತಕೋಟಿ ಡಾಲರ್ ನಷ್ಟ ಅನುಭವಿಸಿವೆ.

ಇನ್ನೊಂದು ಐಟಿ ದೈತ್ಯ ವಿಪ್ರೋ 227 ಬಿಲಿಯನ್ ಡಾಲರ್ ಕುಸಿತ ಕಂಡಿದೆ. ಇದಲ್ಲದೆ, ಟಾಟಾ ಕಮ್ಯೂನಿಕೇಶನ್, ಮಹಾನಗರ್ ಟೆಲಿಫೋನ್ ನಿಗಮ್‌ಗಳ ಶೇರುಗಳು ಕುಸಿತ ಕಂಡಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಶ್ವಬ್ಯಾಂಕು ಗುತ್ತಿಗೆಗೆ ವಿಪ್ರೋ ಅನರ್ಹ
ಲಾರಿ ಮುಷ್ಕರ ಎಂಟನೆ ದಿನಕ್ಕೆ, ಕೇಂದ್ರದ ಸಭೆ
ಸತ್ಯಂ: ಕೇಂದ್ರದಿಂದ 3 ಸ್ವತಂತ್ರ ನಿರ್ದೇಶಕರ ನೇಮಕ
ಸತ್ಯಂ ಹಗರಣ: ಸಿಎಫ್‌ಓ ಶ್ರೀನಿವಾಸ್ ಬಂಧನ
ಲಾರಿ ಮುಷ್ಕರ 7ನೇ ದಿನಕ್ಕೆ; ಜನಜೀವನ ದುಸ್ತರ
ಬಿಡುಗಡೆ ಮಾಡಿದ್ರೆ ಮಾತ್ರ ಮಾತು-ಕತೆ: ಟ್ರಕ್ ಮಾಲೀಕರು