ನವದೆಹಲಿ: ದೇಶದಲ್ಲಿ 2008ರ ಡಿಸೆಂಬರ್ ಕಾರು ಮಾರಾಟದಲ್ಲಿ ಶೇ.6.9ರಷ್ಟು ಇಳಿಕೆಯಾಗಿದ್ದು, ಹಿಂದಿನ ವರ್ಷ ಇದೇ ತಿಂಗಳಲ್ಲಿ 88,272 ಇದ್ದ ಕಾರುಗಳ ಮಾರಾಟ ಸಂಖ್ಯೆಯು ಈ ವರ್ಷ 82,105ಕ್ಕೆ ಇಳಿದಿದೆ ಎಂದು ಭಾರತೀಯ ಆಟೋಮೊಬೈಲ್ ತಯಾರಕರ ಸಂಘದ ಪ್ರಕಟಣೆ ತಿಳಿಸಿದೆ. ಇದೇ ರೀತಿ ಮೋಟಾರು ಸೈಕಲುಗಳ ಪ್ರಮಾಣವು ಕೂಡ ಶೇ. 22.9 ಇಳಿದು, 3,35,820ಕ್ಕೆ ತಲುಪಿದೆ. ಅದಕ್ಕೂ ಹಿಂದಿನ ವರ್ಷ 4,35,925 ದ್ವಿಚಕ್ರವಾಹನಗಳು ಮಾರಾಟವಾಗಿದ್ದವು. |