ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸಂಕ್ರಾಂತಿ ಬೇಡಿಕೆ: ಏರಿದ ಚಿನ್ನ, ಕುಸಿದ ಬೆಳ್ಳಿ ದರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಕ್ರಾಂತಿ ಬೇಡಿಕೆ: ಏರಿದ ಚಿನ್ನ, ಕುಸಿದ ಬೆಳ್ಳಿ ದರ
ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಚಿನ್ನದ ಖರೀದಿ ಆಸಕ್ತಿ ಹೆಚ್ಚಿದ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಸೋಮವಾರ 10 ಗ್ರಾಂ.ಗೆ 10 ರೂ. ಏರಿಕೆ ಕಂಡು 13,500 ರೂಪಾಯಿಯಲ್ಲಿ ಸ್ಥಿರವಾಯಿತು. ಆದರೆ, ಬೆಳ್ಳಿಯ ಬೆಲೆ ಸೂಕ್ತ ಬೆಂಬಲ ಇಲ್ಲದ ಕಾರಣದಿಂದಾಗಿ ಕುಸಿತ ಕಂಡಿತು.

ಮಕರ ಸಂಕ್ರಾಂತಿಯನ್ನು ಹಿಂದೂಗಳು ಶುಭದಿನವಾಗಿ ಪರಿಗಣಿಸಿ, ಚಿನ್ನಾಭರಣ ಖರೀದಿಗೆ ಮುಂದಾಗಿರುವುದರಿಂದ ಬೇಡಿಕೆ ಹೆಚ್ಚಳವಾಗಿ ಬೆಲೆಯೂ ಏರಿಕೆ ಕಂಡಿತು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ಮತ್ತು ಆಭರಣ ಚಿನ್ನದ ದರವು ತಲಾ 10 ರೂ. ಏರಿಕೆ ಕಂಡು ಅನುಕ್ರಮವಾಗಿ 13,500 ಹಾಗೂ 13,350 ರೂ. ತಲುಪಿದವು. ಸೊವರಿನ್ (8 ಗ್ರಾಂ) ಚಿನ್ನವು 25 ರೂ. ಏರಿಕೆ ಕಂಡು 10,750 ರೂ.ಗೆ ತಲುಪಿತು.

ಮತ್ತೊಂದೆಡೆ, ಬೆಳ್ಳಿಯ ಬೆಲೆಯು ಕಿಲೋಗೆ 20 ರೂ. ಕುಸಿದು 18,430 ರೂ.ಗೆ ತಲುಪಿತಾದರೂ, ಬೆಳ್ಳಿ ನಾಣ್ಯದ ಬೆಲೆಯು ಸ್ಥಿರತೆ ಕಾಯ್ದುಕೊಂಡಿದ್ದು, 100 ನಾಣ್ಯಗಳ ಖರೀದಿಗೆ 27000 ರೂ. ಹಾಗೂ ಮಾರಾಟಕ್ಕೆ 27,100 ರೂಪಾಯಿ ಇತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾರು, ಬೈಕ್ ಮಾರಾಟ ಇಳಿಕೆ
ಯುಎಸ್ ಶೇರು ಮಾರುಕಟ್ಟೆಯಲ್ಲಿ ನೆಲಕಚ್ಚಿದ ಭಾರತೀಯ ಶೇರುಗಳು
ವಿಶ್ವಬ್ಯಾಂಕು ಗುತ್ತಿಗೆಗೆ ವಿಪ್ರೋ ಅನರ್ಹ
ಲಾರಿ ಮುಷ್ಕರ ಎಂಟನೆ ದಿನಕ್ಕೆ, ಕೇಂದ್ರದ ಸಭೆ
ಸತ್ಯಂ: ಕೇಂದ್ರದಿಂದ 3 ಸ್ವತಂತ್ರ ನಿರ್ದೇಶಕರ ನೇಮಕ
ಸತ್ಯಂ ಹಗರಣ: ಸಿಎಫ್‌ಓ ಶ್ರೀನಿವಾಸ್ ಬಂಧನ