ಬೆಂಗಳೂರು: ಫಾರ್ಮಾ ಉದ್ಯಮದ ಸವಾಲುಗಳು, ಪರಿಹಾರೋಪಾಯಗಳ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಜನವರಿ 24ರಂದು ಬೆಂಗಳೂರಿನಲ್ಲಿ ವರ್ಷದ ಅತಿದೊಡ್ಡ ಫಾರ್ಮಾಸ್ಯೂಟಿಕಲ್ ನಾಯಕತ್ವ ಸಮಾವೇಶವೊಂದು ಲೀ ಮೆರೆಡಿಯನ್ ಹೋಟೆಲ್ನಲ್ಲಿ ನಡೆಯಲಿದೆ. ಬಯೋಕಾನ್ನ ಕಿರಣ್ ಮುಜುಮ್ದಾರ್, ಫೈಜರ್ನ ಕೇವಾಲ್ ಹಾಂಡಾ, ಎಲ್ಡರ್ ಹೆಲ್ತ್ಕೇರ್ನ ಅನುಜ್ ಸಕ್ಸೇನಾ, ಅಪೋಲೋ ಹಾಸ್ಪಿಟಲ್ಸ್ನ ಸಮೀತಾ ರೆಡ್ಡಿ, ಏಷ್ಯನ್ ಹಾರ್ಟ್ ಇನ್ಸ್ಟಿಟ್ಯೂಟ್ನ ಡಾ.ರಮಾಕಾಂತ್ ಪಾಂಡ ಮುಂತಾದವರು ಮತ್ತು ಶ್ರೀಲಂಕಾ, ಬಾಂಗ್ಲಾದೇಶ, ಮಧ್ಯಪೂರ್ವ, ಅಮೆರಿಕ ಮುಂತಾದ ದೇಶಗಳಿಂದಲೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. |