ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬೇಡಿಕೆ ಪರಿಶೀಲನೆಗೆ ಸಮಿತಿ: ಟ್ರಕ್ ಮುಷ್ಕರ ಅಂತ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೇಡಿಕೆ ಪರಿಶೀಲನೆಗೆ ಸಮಿತಿ: ಟ್ರಕ್ ಮುಷ್ಕರ ಅಂತ್ಯ
ಎಂಟು ದಿನಗಳಿಂದ ನಡೆಯುತ್ತಿರುವ ಲಾರಿ-ಟ್ರಕ್ ಮುಷ್ಕರ ಕೊನೆಗೊಂಡಿದೆ. ದೇಶಾದ್ಯಂತ ಏಕರೂಪ ಪರವಾನಗಿ ವ್ಯವಸ್ಥೆ, ಸೇವಾ ತೆರಿಗೆ ಮುಂತಾದ ಬೇಡಿಕೆಗಳ ಪರಿಶೀಲನೆಗೆ ಸಮಿತಿ ರಚಿಸಲು ಸರಕಾರ ನಿರ್ಧರಿಸಿದ್ದು, ಸೇವೆಗೆ ಮರಳುವಂತೆ ಮುಷ್ಕರನಿರತ ಟ್ರಕ್ ಮಾಲೀಕರಿಗೆ ಮನವಿ ಮಾಡಿಕೊಳ್ಳಲಾಗಿದೆ. ಇದರೊಂದಿಗೆ, ಟ್ರಕ್ ಮುಷ್ಕರದಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆ ನಿಟ್ಟುಸಿರುಬಿಡುವಂತಾಗಿದೆ.

ಮುಷ್ಕರವನ್ನು ನಿಲ್ಲಿಸಲಾಗಿದೆ ಎಂದು ಕೇಂದ್ರ ಸಾರಿಗೆ ಕಾರ್ಯದರ್ಶಿ ಬ್ರಹ್ಮ ದತ್ತ ಅವರು ಸೋಮವಾರ ಟ್ರಕ್ ಮಾಲೀಕರೊಂದಿಗೆ ಎರಡನೇ ಸುತ್ತಿನ ಮಾತುಕತೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಮಧ್ಯೆ, ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಾಲು, ಎಐಎಂಟಿಸಿಯ ಬಂಧಿತ 30 ಮುಂದಾಳುಗಳಲ್ಲಿ, ಕ್ರಿಮಿನಲ್ ಕೇಸು ಎದುರಿಸುತ್ತಿರುವವರನ್ನು ಹೊರತುಪಡಿಸಿ ಉಳಿದವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಘೋಷಿಸಿದರು.

ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ (ಎಐಎಂಟಿಸಿ)ಯು ತನ್ನ ಬಂಧಿತ ನಾಯಕರನ್ನು ಬಿಡುಗಡೆಗೊಳಿಸಬೇಕು, ಡೀಸೆಲ್ ಬೆಲೆ ಇಳಿಸಬೇಕು ಮತ್ತು ದೇಶಾದ್ಯಂತ ಏಕರೂಪ ಪರವಾನಗಿ ವ್ಯವಸ್ಥೆ ಜಾರಿಗೊಳಿಸಬೇಕು ಎಂಬ ಬೇಡಿಕೆಗೆ ಆತುಕೊಂಡಿದ್ದರೆ, ಟ್ರಕ್ ಮಾಲೀಕರು ಮೊದಲು ಮುಷ್ಕರ ನಿಲ್ಲಿಸಿ, ನಂತರ ಮಾತುಕತೆ ನಡೆಸಬೇಕು ಎಂದು ಸರಕಾರವು ಷರತ್ತು ಒಡ್ಡಿತ್ತು.

ನಮ್ಮ ಬೇಡಿಕೆ ಈಡೇರುವವರೆಗೆ ಮತ್ತು ಎಸ್ಮಾ ಕಾಯಿದೆಯಡಿ ಬಂಧಿತರಾಗಿರುವ ಎಐಎಂಟಿಸಿ ಅಧ್ಯಕ್ಷ, ಕಾರ್ಯದರ್ಶಿ ಮತ್ತಿತರ ಮುಖಂಡರನ್ನು ಬಿಡುಗಡೆಗೊಳಿಸುವವರೆಗೂ ಮುಷ್ಕರ ಮುಂದುವರಿಸುವುದಾಗಿ ಸೋಮವಾರ ಅಪರಾಹ್ನ ಸಾರಿಗೆ ಸಚಿವ ಟಿ.ಆರ್.ಬಾಲು ಜತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರಿಗೆ ಎಐಎಂಟಿಸಿ ಆಡಳಿತ ಮಂಡಳಿ ಸದಸ್ಯ ರಾಜೀವ್ ಗುಪ್ತಾ ಹೇಳಿದ್ದರು.

ಸೋಮವಾರ ಸಂಜೆ, ವಿವಿಧ ರಾಜ್ಯಗಳ ಸಾರಿಗೆ ಸಚಿವರು ಹಾಗೂ ಕೇಂದ್ರ ಸಾರಿಗೆ ಸಚಿವ ಟಿ.ಆರ್.ಬಾಲು ಮಧ್ಯೆ ನಡೆದ ಮುಚ್ಚಿದ ಬಾಗಿಲ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿ, ಬ್ರಹ್ಮ ದತ್ತ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ವಿವಿಧ ರಾಜ್ಯಗಳಲ್ಲಿ ಲಾರಿಗಳು ಸಮಸ್ಯೆಯಿಲ್ಲದೆ ಚಲಿಸುವಂತಾಗಲು, ಏಕರೂಪ ಪರವಾನಗಿ ಮತ್ತು ಸೇವಾ ತೆರಿಗೆಯ ಸರಳೀಕರಣದ ಬೇಡಿಕೆ ಕುರಿತು ಪರಿಶೀಲನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ತಮ್ಮ ಸೇವೆಗಳನ್ನು ಪುನರಾರಂಭಿಸುವಂತೆ ಆಯಾ ರಾಜ್ಯಗಳ ಟ್ರಕ್ ಮಾಲೀಕರಿಗೆ ಮನವಿ ಮಾಡಿಕೊಳ್ಳಲು ಎಲ್ಲ ರಾಜ್ಯಗಳಿಗೆ ಸೂಚಿಸಲಾಯಿತು. ಆದರೆ ಟ್ರಕ್ ಮುಷ್ಕರ ನಿಂತ ಬಳಿಕವಷ್ಟೇ ಈ ಕುರಿತು ಸರಕಾರ ಅವರೊಂದಿಗೆ ಮಾತುಕತೆ ನಡೆಸಬೇಕೆಂಬ ಬಗ್ಗೆ ಸಭೆಯಲ್ಲಿ ಒಮ್ಮತ ಮೂಡಿತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
24ರಂದು ಫಾರ್ಮಾ ಸಮಾವೇಶ
ಸಂಕ್ರಾಂತಿ ಬೇಡಿಕೆ: ಏರಿದ ಚಿನ್ನ, ಕುಸಿದ ಬೆಳ್ಳಿ ದರ
ಕಾರು, ಬೈಕ್ ಮಾರಾಟ ಇಳಿಕೆ
ಯುಎಸ್ ಶೇರು ಮಾರುಕಟ್ಟೆಯಲ್ಲಿ ನೆಲಕಚ್ಚಿದ ಭಾರತೀಯ ಶೇರುಗಳು
ವಿಶ್ವಬ್ಯಾಂಕು ಗುತ್ತಿಗೆಗೆ ವಿಪ್ರೋ ಅನರ್ಹ
ಲಾರಿ ಮುಷ್ಕರ ಎಂಟನೆ ದಿನಕ್ಕೆ, ಕೇಂದ್ರದ ಸಭೆ