ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇನ್ಫೋಸಿಸ್‌ಗೆ 1,641 ಕೋಟಿ ನಿವ್ವಳ ಲಾಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ಫೋಸಿಸ್‌ಗೆ 1,641 ಕೋಟಿ ನಿವ್ವಳ ಲಾಭ
PTI
ದೇಶದ ಪ್ರಮುಖ ಸಾಫ್ಟ್‌ವೇರ್ ಕಂಪೆನಿಯಾದ ಇನ್ಫೋಸಿಸ್, 2008 ಡಿಸೆಂಬರ್ 31ಕ್ಕೆ ಅಂತ್ಯಗೊಂಡಂತೆ ಮೂರನೇ ತ್ರೈಮಾಸಿಕ ವರದಿಯನ್ನು ಬಿಡುಗಡೆಗೊಳಿಸಿದ್ದು, ನಿವ್ವಳ ಲಾಭದಲ್ಲಿ ಶೇ 33.31ರಷ್ಟು ಹೆಚ್ಚಳವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಇನ್ಫೋಸಿಸ್ ಸಾಫ್ಟ್‌ವೇರ್ ಸಂಸ್ಥೆ ಕಳೆದ ವರ್ಷದ ತ್ರೈಮಾಸಿಕ ಸಾಲಿನಲ್ಲಿ 1,231 ಕೋಟಿ ರೂ.ಗಳ ಲಾಭ ಗಳಿಸಿದ್ದು, 2008 ಡಿಸೆಂಬರ್ 31ಕ್ಕೆ ಅಂತ್ಯಗೊಂಡಂತೆ ಮೂರನೇ ತ್ರೈಮಾಸಿಕದಲ್ಲಿ 1,641 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಮುಂಬೈ ಶೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.


ಪ್ರಸಕ್ತ ಅನಿಶ್ಚಿತ ಆರ್ಥಿಕ ಸ್ಥಿತಿಯಲ್ಲಿ ಕಂಪೆನಿಯ ಬಲಿಷ್ಟ ಹಾಗೂ ಕಾರ್ಯವ್ಯಾಪ್ತಿಯ ವಿಸ್ತಾರದ ಹರಿವು ಮತ್ತು ಆರ್ಥಿಕ ಸಂಪನ್ಮೂಲಗಳು ಉತ್ತಮವಾಗಿವೆ ಎಂದು ಇನ್ಫೋಸಿಸ್ ಮುಖ್ಯ ಹಣಕಾಸು ಅಧಿಕಾರಿ ವಿ. ಬಾಲಕೃಷ್ಣನ್ ಹೇಳಿದ್ದಾರೆ.

ಮೂರನೇ ತ್ರೈಮಾಸಿಕದಲ್ಲಿ ಅಮೆರಿಕದ ಡಾಲರ್ ಎದುರು ಏಷ್ಯಾ ಕರೆನ್ಸಿಗಳ ಅಪಮೌಲ್ಯಗಳಿಂದಾಗಿ ಲಾಭಾಂಶ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ

ಪ್ರಸಕ್ತ ಮೂರನೇ ತ್ರೈಮಾಸಿಕದಲ್ಲಿ 30 ಹೊಸ ಗ್ರಾಹಕರನ್ನು ಕಂಪೆನಿ ಸೇರ್ಪಡೆಗೊಳಿಸಿದ್ದು, 5,997 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಇದರಿಂದಾಗಿ ಕಂಪೆನಿಯಲ್ಲಿ ಒಟ್ಟು 1,03,078 ಉದ್ಯೋಗಿಗಳನ್ನು ಹೊಂದಿದಂತಾಗಿದೆ ಎಂದು ಬಾಲಕೃಷ್ಣನ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ವಿಲೀನ ಆಯ್ಕೆ ಮುಕ್ತ; ಸ್ವತಂತ್ರ ಆಡಿಟಿಂಗ್
ಬೇಡಿಕೆ ಪರಿಶೀಲನೆಗೆ ಸಮಿತಿ: ಟ್ರಕ್ ಮುಷ್ಕರ ಅಂತ್ಯ
24ರಂದು ಫಾರ್ಮಾ ಸಮಾವೇಶ
ಸಂಕ್ರಾಂತಿ ಬೇಡಿಕೆ: ಏರಿದ ಚಿನ್ನ, ಕುಸಿದ ಬೆಳ್ಳಿ ದರ
ಕಾರು, ಬೈಕ್ ಮಾರಾಟ ಇಳಿಕೆ
ಯುಎಸ್ ಶೇರು ಮಾರುಕಟ್ಟೆಯಲ್ಲಿ ನೆಲಕಚ್ಚಿದ ಭಾರತೀಯ ಶೇರುಗಳು