ಏಷ್ಯಾ ಶೇರುಪೇಟೆಗಳ ಏರಿಳಿಕೆಯಿಂದಾಗಿ ತೈಲಸಂಸ್ಥೆಗಳು ಹಾಗೂ ಅಮುದಾರರು ಡಾಲರ್ಗಳಿಗೆ ಮೊರೆಹೋದ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ 11ಪೈಸೆ ಏರಿಕೆ ಕಂಡಿದೆ. ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ದೇಶಿಯ ಕರೆನ್ಸಿ ಡಾಲರ್ ಎದುರಿಗೆ 48.94 ರೂ.ಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 11 ಪೈಸೆ ಕುಸಿತ ಕಂಡು 48.83/84 ರೂ.ಗಳಿಗೆ ತಲುಪಿದೆ. ಅಮುದು ವಹಿವಾಟುದಾರರು ಹಾಗೂ ಸರಕಾರಿ ಸ್ವಾಮ್ಯದ ಬ್ಯಾಂಕ್ಗಳು ತೈಲಸಂಸ್ಥೆಗಳಿಂದ ಡಾಲರ್ ಬೇಡಿಕೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಡೀಲರ್ಗಳು ತಿಳಿಸಿದ್ದಾರೆ. ಏಷ್ಯಾ ಮಾರುಕಟ್ಟೆಯಲ್ಲಿ ಜಪಾನ್ನ ನಿಕೈ ಶೇ.3.9 ರಷ್ಟು ಏರಿಕೆ ಕಂಡಿದ್ದು, ಹಾಂಗ್ಕಾಂಗ್ನ ಹಾಂಗ್ಸೆಂಗ್ ಮಾರುಕಟ್ಟೆ ವಹಿವಾಟಿನಲ್ಲಿ ಶೇ.0.32 ಏರಿಕೆಯಾಗಿದೆ ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ. |