ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜ.15 ರಂದು ಪೆಟ್ರೋಲ್, ಡೀಸೆಲ್‌ ದರ ಕಡಿತ ಸಾಧ್ಯತೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜ.15 ರಂದು ಪೆಟ್ರೋಲ್, ಡೀಸೆಲ್‌ ದರ ಕಡಿತ ಸಾಧ್ಯತೆ?
PTI
ಕೇಂದ್ರ ಸರಕಾರ ಗುರುವಾರದಂದು ಪೆಟ್ರೋಲ್, ಡೀಸೆಲ್ ಮತ್ತು ಅನಿಲ ದರಗಳನ್ನು ಕಡಿತಗೊಳಿಸಿ ಆದೇಶ ಹೊರಡಿಸುವ ಸಾಧ್ಯತೆಗಳಿವೆ ಎಂದು ಪೆಟ್ರೋಲೀಯಂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರದಂದು ಸಚಿವ ಸಂಪುಟ ಸಭೆ ಸೇರಲಿದ್ದು, ಪೆಟ್ರೋಲ್ ಪ್ರತಿ ಲೀಟರ್‌ಗೆ 5 ರೂಪಾಯಿ, ಡೀಸೆಲ್‌ 3 ರೂ. ಮತ್ತು ಅನಿಲ ಸಿಲಿಂಡರ್ ದರದಲ್ಲಿ 25 ರೂಪಾಯಿ ಕಡಿತಗೊಳಿಸುವ ಸಾಧ್ಯತೆಗಳಿದ್ದು, ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪ್ರತಿ ಲೀಟರ್‌ ಪೆಟ್ರೋಲ್‌ಗೆ 9.70 ರೂಪಾಯಿ, ಡೀಸೆಲ್‌ಗೆ 3.70 ರೂಪಾಯಿ ಲಾಭಗಳಿಸುತ್ತಿದ್ದು, ಅನಿಲ ಪ್ರತಿ ಸಿಲಿಂಡರ್‌ಗೆ 31.70 ರೂಪಾಯಿ ಹಾಗೂ ಪ್ರತಿ ಲೀಟರ್‌ ಸೀಮೆ ಎಣ್ಣೆಗೆ 11.69 ರೂಪಾಯಿ ನಷ್ಟ ಅನುಭವಿಸುತ್ತಿವೆ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಸರಕಾರ ಹೆಚ್ಚುವರಿ ಆದಾಯವನ್ನು ಕ್ರೂಢೀಕರಿಸಲು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲೆ 1 ರೂಪಾಯಿ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ವಿಧಿಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್‌ಪಿಜಿ ಮತ್ತು ಸೀಮೆಎಣ್ಣೆ ಮಾರಾಟದಲ್ಲಿ ಅನುಭವಿಸುತ್ತಿರುವ ನಷ್ಟವನ್ನು ಸರಿತೂಗಿಸಲು ಪ್ರಸಕ್ತ ವರ್ಷದಲ್ಲಿ ಹೆಚ್ಚುವರಿಯಾಗಿ 30,000 ಕೋಟಿ ರೂ.ಗಳ ಬಾಂಡ್‌ಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ಪ್ರತಿ ಬ್ಯಾರೆಲ್‌ಗೆ 40 ಡಾಲರ್‌ಗೆ ಇಳಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕಳೆದ ಡಿಸೆಂಬರ್ 5 ರಂದು ಪೆಟ್ರೋಲ್‌ಗೆ 5 ರೂಪಾಯಿ ಹಾಗೂ ಡೀಸೆಲ್‌‌ಗೆ 2 ರೂಪಾಯಿ ಕಡಿತಗೊಳಿಸಿ ಆದೇಶ ಹೊರಡಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಇನ್ಫೋಸಿಸ್‌ಗೆ 1,641 ಕೋಟಿ ನಿವ್ವಳ ಲಾಭ
ಸತ್ಯಂ ವಿಲೀನ ಆಯ್ಕೆ ಮುಕ್ತ; ಸ್ವತಂತ್ರ ಆಡಿಟಿಂಗ್
ಬೇಡಿಕೆ ಪರಿಶೀಲನೆಗೆ ಸಮಿತಿ: ಟ್ರಕ್ ಮುಷ್ಕರ ಅಂತ್ಯ
24ರಂದು ಫಾರ್ಮಾ ಸಮಾವೇಶ
ಸಂಕ್ರಾಂತಿ ಬೇಡಿಕೆ: ಏರಿದ ಚಿನ್ನ, ಕುಸಿದ ಬೆಳ್ಳಿ ದರ