ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಿರಿಯ ಉದ್ಯಮಿಗಳಿಂದ ಪ್ರಧಾನಿ ಭೇಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಿರಿಯ ಉದ್ಯಮಿಗಳಿಂದ ಪ್ರಧಾನಿ ಭೇಟಿ
PTI
ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯ ಹಗರಣದ ಹಿನ್ನೆಲೆಯಲ್ಲಿ ದೇಶದ ಕೈಗಾರಿಕೆ ಕ್ಷೇತ್ರಗಮೇಲಾದ ಪರಿಣಾಮಗಳ ಕುರಿತಂತೆ ಚರ್ಚಿಸಲು ಹಿರಿಯ ಉದ್ಯಮಿಗಳು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದರು.

ಮಾಜಿ ಸಿಐಐ ಅಧ್ಯಕ್ಷ ಆರ್ ಶೇಷಾಶಾಯಿ, ಸಿಐಐ ಮುಖ್ಯಪ್ರವರ್ತಕ ತರುಣ್ ದಾಸ್ ಮತ್ತು ಸುರೇಶ್ ನಿಯೋಟಿಯಾ ಹಾಗೂ ಗುಜರಾತ್ ಅಂಬುಜಾ ಸಿಮೆಂಟ್‌ ಕಂಪೆನಿಯ ಅಧ್ಯಕ್ಷ ಸೇರಿದಂತೆ ಹಲವು ಉದ್ಯಮಿಗಳು ಪ್ರಧಾನಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಕೈಗಾರಿಕೋದ್ಯಮದ ಬೆಳವಣಿಗೆಗಳ ಕುರಿತಂತೆ ಚರ್ಚಿಸಿದರು.

ಸತ್ಯಂ ವಂಚನೆ ಪ್ರಕರಣ ಸೇರಿದಂತೆ ವಿಶ್ವಬ್ಯಾಂಕ್ ದೇಶದ ಐದು ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಮೇಲೆ ಹೇರಿರುವ ನಿಷೇಧ ಕುರಿತಂತೆ ಪ್ರಧಾನಿಯವರೊಂದಿಗೆ ಚರ್ಚಿಸಲಾಯಿತು ಎಂದು ಉದ್ಯಮಿಗಳು ತಿಳಿಸಿದ್ದಾರೆ.

ಸತ್ಯಂ ಕಂಪ್ಯೂಟರ್ಸ್ ಪುನಶ್ಚೇತನಕ್ಕಾಗಿ ಸರಕಾರ ಮಧ್ಯಸ್ಥಿಕೆ ವಹಿಸಿ, ನೂತನ ನಿರ್ದೇಶಕ ಮಂಡಳಿಯನ್ನು ರಚಿಸಿರುವುದನ್ನು ಉದ್ಯಮಿಗಳು ಸ್ವಾಗತಿಸಿದರು

ದೇಶದ ಕೈಗಾರಿಕೋದ್ಯಮದ ಸ್ವರೂಪವನ್ನು ಉಳಿಸಲು ಸಿಐಐ, ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ನರೇಶ್ ಚಂದ್ರ ಅವರ ನೇತೃತ್ವದಲ್ಲಿ ಕಾರ್ಪೋರೇಟ್ ಸಂಸ್ಥೆಗಳ ಮೇಲ್ವಿಚಾರಣೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಸಿಐಐ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜ.15 ರಂದು ಪೆಟ್ರೋಲ್, ಡೀಸೆಲ್‌ ದರ ಕಡಿತ ಸಾಧ್ಯತೆ?
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಇನ್ಫೋಸಿಸ್‌ಗೆ 1,641 ಕೋಟಿ ನಿವ್ವಳ ಲಾಭ
ಸತ್ಯಂ ವಿಲೀನ ಆಯ್ಕೆ ಮುಕ್ತ; ಸ್ವತಂತ್ರ ಆಡಿಟಿಂಗ್
ಬೇಡಿಕೆ ಪರಿಶೀಲನೆಗೆ ಸಮಿತಿ: ಟ್ರಕ್ ಮುಷ್ಕರ ಅಂತ್ಯ
24ರಂದು ಫಾರ್ಮಾ ಸಮಾವೇಶ